ಕರ್ನಾಟಕ

karnataka

ETV Bharat / bharat

ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿ 'ಮನ್ ಕಿ ಬಾತ್' - ಇಂದು ಪ್ರಧಾನಿ ಮೋದಿ ಮನ್ ಕಿ ಬಾತ್

ದೇಶದಲ್ಲಿ ಕೋವಿಡ್‌ ಅಟ್ಟಹಾಸದ ನಡುವೆ ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

PM Modi Man Ki baat
ಇಂದು ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

By

Published : Apr 25, 2021, 7:39 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 11 ಗಂಟೆಗೆ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ಮಾತನಾಡಲಿದ್ದು, ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳು, ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಸ್ತಾಪಿಸಲಿದ್ದಾರೆ.

ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಆಮ್ಲಜನಕ ಮತ್ತು ಆಮ್ಲಜನಕ ಸಂಬಂಧಿತ ಉಪಕರಣಗಳು ಮತ್ತು ಕೋವಿಡ್​-19 ಲಸಿಕೆಗಳ ಮೇಲಿನ ಸೀಮಾ ಸುಂಕ ಮನ್ನಾ ಮಾಡುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ:ದೆಹಲಿ ಆಸ್ಪತ್ರೆಯ 50 ಮಂದಿ ಸೋಂಕಿತರಿಗೆ ಬೇಕೇ ಬೇಕು ಆಕ್ಸಿಜನ್‌, ಆದ್ರೆ ಪೂರೈಕೆಯೇ ಇಲ್ಲ!

ದೇಶಾದ್ಯಂತ ಕೋವಿಡ್​ ಉಲ್ಬಣಿಸುತ್ತಿದ್ದು, ಕೊರೊನಾ ಲಸಿಕೆಯಲ್ಲಿ ಭಾರತ ವಿಶ್ವದಲ್ಲಿಯೇ ಮುನ್ನಡೆ ಸಾಧಿಸಿದೆ. ಇನ್ನೊಂದೆಡೆ, ಹಲವೆಡೆ ಆಕ್ಸಿಜನ್​ ಹಾಗೂ ಕೊರೊನಾ ಸೋಂಕಿತರಿಗೆ ಬೆಡ್​ ಅಭಾವ ಉಂಟಾಗಿದೆ. ಎಷ್ಟೋ ಜನ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಈ ಎಲ್ಲ ವಿಚಾರಗಳ ಮೇಲೆ ಮೋದಿ ಮಾತನಾಡಲಿದ್ದಾರೆ.

ABOUT THE AUTHOR

...view details