ನವದೆಹಲಿ: ರಾಜಕಾರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬದ್ಧ ಎದುರಾಳಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆ, ರಾಜಕೀಯ ಹೊರತು ಪಡಿಸಿದರೆ ಇಬ್ಬರ ಮಧ್ಯೆಯೂ ಉತ್ತಮ ಬಾಂಧವ್ಯ ಇದೆ ಎಂದೂ ಆಗಾಗ್ಗೆ ಕೆಲ ಸನ್ನಿವೇಶಗಳಿಂದ ಗೊತ್ತಾಗಿದೆ ಕೂಡ. ಇಂತಹ ಮತ್ತೊಂದು ಪ್ರಸಂಗ ಪ್ರಧಾನಿ ಮೋದಿ ಹಾಗೂ ಸಿಎಂ ಮಮತಾ ನಡುವೆ ಶನಿವಾರ ನಡೆದಿದೆ ಎನ್ನಲಾಗುತ್ತಿದೆ.
ದೆಹಲಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಪಾಲ್ಗೊಂಡಿದ್ದರು. ಈ ಸಮಾವೇಶದಲ್ಲಿ ಮೋದಿ ಮತ್ತು ಮಮತಾ ಮುಖಾಮುಖಿಯಾಗಿದ್ದರು. ಅಷ್ಟೇ ಅಲ್ಲ, ಪರಸ್ಪರ ಮಾತುಕತೆ ಸಹ ನಡೆಸಿದ್ದರು.