ಕರ್ನಾಟಕ

karnataka

ETV Bharat / bharat

ತೆಲಂಗಾಣದ ಮೇಲೆ ಬಿಜೆಪಿ ನಾಯಕರ ದೃಷ್ಟಿ: ಮೇ 26ಕ್ಕೆ ಹೈದರಾಬಾದ್​ಗೆ ಮೋದಿ ಭೇಟಿ ನಿರೀಕ್ಷೆ

ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ನೀಡಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್​ ಕುಮಾರ್​ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ.

PM Modi likely to visit Hyderabad on May 26
ಮೇ 26ಕ್ಕೆ ಹೈದರಾಬಾದ್​ಗೆ ಮೋದಿ ಭೇಟಿ ನಿರೀಕ್ಷೆ

By

Published : May 19, 2022, 4:09 PM IST

ಹೈದರಾಬಾದ್​ (ತೆಲಂಗಾಣ): ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ತೆಲಂಗಾಣದ ಮೇಲೆ ಬಿಜೆಪಿ ನಾಯಕರು ದೃಷ್ಟಿ ನೆಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ನೀಡಿದ ಕೆಲ ದಿನಗಳಲ್ಲೇ ಪ್ರಧಾನಿ ಮೋದಿ ತೆಲಂಗಾಣ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.

ಹೈದರಾಬಾದ್​ನಲ್ಲಿ ಮೇ 26ರಂದು ಇಂಡಿಯನ್​ ಸ್ಕೂಲ್​ ಬಿಸಿನೆಸ್​​ (ಐಎಸ್​ಬಿ)ಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ರಾಜ್ಯ ಬಿಜೆಪಿ ಹೇಳಿದೆ. ಗೃಹ ಸಚಿವ ಅಮಿತ್​ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಕೊಟ್ಟಿರುವ ಬೆನ್ನಲ್ಲೇ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಲಿದೆ ಎಂದು ರಾಜ್ಯ ಘಟಕದ ಅಧ್ಯಕ್ಷರೂ ಆದ ಸಂಸದ ಬಂಡಿ ಸಂಜಯ್​ ಕುಮಾರ್​ ತಿಳಿಸಿದ್ದಾರೆ.

ಅಲ್ಲದೇ, ಪ್ರಧಾನಿಗೆ ಅದ್ಧೂರಿ ಸ್ವಾಗತ ನೀಡಲು ಸಂಜಯ್​ ಕುಮಾರ್​ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ರಾಜ್ಯಾದ್ಯಂತ ಸಂಜಯ್​ ಕುಮಾರ್​ ಪಾದಯಾತ್ರೆ ಕೈಗೊಂಡಿದ್ದು, ಎರಡನೇ ಹಂತದ ಪಾದಯಾತ್ರೆ ಹಿನ್ನೆಲೆಯಲ್ಲಿ ಇದೇ ತಿಂಗಳು ಅಮಿತ್​ ಶಾ, ಜೆ.ಪಿ.ನಡ್ಡಾ ತೆಲಂಗಾಣಕ್ಕೆ ಭೇಟಿ ಕೊಟ್ಟಿದ್ದರು. 2023ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ:ರಸ್ತೆ ಬದಿ ಮಲಗಿದ್ದ 14 ಕಾರ್ಮಿಕರ ಮೇಲೆ ಹರಿದ 'ಯಮ ಸ್ವರೂಪಿ' ಲಾರಿ

ABOUT THE AUTHOR

...view details