ಕರ್ನಾಟಕ

karnataka

ETV Bharat / bharat

ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆಗೆ ಪಿಎಂ ಮೋದಿ ಚಾಲನೆ..ಹಲವು ಭರವಸೆ - ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೇಶಾದ್ಯಂತ ಆರೋಗ್ಯ ಮೂಲಸೌಕರ್ಯ ಬಲಪಡಿಸುವ ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆಯನ್ನು (PMASBY) ಉತ್ತರ ಪ್ರದೇಶದ ವಾರಾಣಸಿಯಿಂದ ಆರಂಭಿಸಿದರು. ಈ ಯೋಜನೆಯ ಮೂಲಕ, ಐದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಎಲ್ಲ ಜಿಲ್ಲೆಗಳಲ್ಲಿ ನಿರ್ಣಾಯಕ ಆರೈಕೆ ಸೇವೆಗಳು ವಿಶೇಷ ನಿರ್ಣಾಯಕ ಆರೈಕೆ ಆಸ್ಪತ್ರೆ ಬ್ಲಾಕ್‌ಗಳ ಮೂಲಕ ಲಭ್ಯವಿದ್ದು, ಉಳಿದ ಜಿಲ್ಲೆಗಳು ರೆಫರಲ್ ಸೇವೆಗಳ ಮೂಲಕ ಒಳಗೊಂಡಿರುತ್ತವೆ.

ಪಿಎಂ ಮೋದಿ
ಪಿಎಂ ಮೋದಿ

By

Published : Oct 25, 2021, 6:46 PM IST

ವಾರಣಾಸಿ (ಉತ್ತರ ಪ್ರದೇಶ):ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೇಶಾದ್ಯಂತ ಆರೋಗ್ಯ ಮೂಲಸೌಕರ್ಯ ಬಲಪಡಿಸುವ ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆಯನ್ನು (PMASBY) ಯೋಜನೆಯನ್ನು ಉತ್ತರ ಪ್ರದೇಶದ ವಾರಾಣಸಿಯಿಂದ ಆರಂಭಿಸಿದರು. ಪ್ರಧಾನಮಂತ್ರಿ ಅವರು 5,200 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.

ಬಿಡುಗಡೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಮೋದಿ, ಕೇಂದ್ರದ ಹಿಂದಿನ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು ಸ್ವಾತಂತ್ರ್ಯದ ನಂತರ ರಾಷ್ಟ್ರದ ಆರೋಗ್ಯ ಮೂಲಸೌಕರ್ಯಕ್ಕೆ ದೀರ್ಘಕಾಲದವರೆಗೆ ಗಮನ ನೀಡಲಿಲ್ಲ ಎಂದು ಹೇಳಿದರು. ದೀರ್ಘಕಾಲದವರೆಗೆ ದೇಶವನ್ನು ಆಳಿದ ಜನರು, ಆರೋಗ್ಯ ವ್ಯವಸ್ಥೆಯನ್ನು ಅದರ ಅಭಿವೃದ್ಧಿಗೆ ಅನುಕೂಲವಾಗುವ ಬದಲು ಸೌಲಭ್ಯಗಳಿಲ್ಲದೇ ಉಳಿಸಿಕೊಂಡರು. ಹಳ್ಳಿಗಳಲ್ಲಿ ಆಸ್ಪತ್ರೆಗಳಿಲ್ಲ ಅಥವಾ ಇದ್ದ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ ಎಂದರು.

ಪ್ರಸ್ತುತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಬಡವರ, ದೀನದಲಿತರ, ತುಳಿತಕ್ಕೊಳಗಾದ ಮತ್ತು ಹಿಂದುಳಿದ ವರ್ಗದ ಜನರ ನೋವನ್ನು ಅರ್ಥಮಾಡಿಕೊಂಡಿದೆ. ನಾವು ದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಮೋದಿ ಹೇಳಿದರು.

ಸಬ್ಕೋ ವ್ಯಾಕ್ಸಿನ್, ಮಫ್ತ್ ವ್ಯಾಕ್ಸಿನ್'

ಕೇಂದ್ರದ 'ಸಬ್ಕೋ ವ್ಯಾಕ್ಸಿನ್, ಮಫ್ತ್ ವ್ಯಾಕ್ಸಿನ್' ರಾಷ್ಟ್ರವ್ಯಾಪಿ ಅಭಿಯಾನ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಪ್ರಧಾನಿ ಹೇಳಿದರು. ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ, ರಾಷ್ಟ್ರವು 100 ಕೋಟಿ ಲಸಿಕೆ ಡೋಸ್‌ಗಳನ್ನು ನೀಡುವ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಬಾಬಾ ವಿಶ್ವನಾಥ್, ಮಾ ಗಂಗಾ ಮತ್ತು ಕಾಶಿಯ ಜನರ ಆಶೀರ್ವಾದದೊಂದಿಗೆ, 'ಸಬ್ಕೋ ವ್ಯಾಕ್ಸಿನ್, ಮಫ್ತ್ ವ್ಯಾಕ್ಸಿನ್' ಅಭಿಯಾನ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಕಚೇರಿಯ ಪ್ರಕಾರ, PMASBY ನ ಉದ್ದೇಶ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಲ್ಲಿನ ಅಂತರವನ್ನು ಭರಿಸುವುದು. ವಿಶೇಷವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಣಾಯಕ ಆರೈಕೆ ಸೌಲಭ್ಯಗಳು ಮತ್ತು ಪ್ರಾಥಮಿಕ ಆರೈಕೆಗೆ ಒತ್ತು ಕೊಡುವುದು. ಇದು 10 ಹೆಚ್ಚಿನ ಗಮನ ಕೇಂದ್ರೀಕರಿಸಿದ 17,788 ಗ್ರಾಮೀಣ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಬೆಂಬಲವನ್ನು ಒದಗಿಸುತ್ತದೆ. ಎಲ್ಲಾ ರಾಜ್ಯಗಳಲ್ಲಿ 11,024 ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮೋದಿ ಘೋಷಿಸಿದರು.

ಎಲ್ಲ ಜಿಲ್ಲೆಗಳಲ್ಲಿ ಆರೈಕೆ ಆಸ್ಪತ್ರೆ ಬ್ಲಾಕ್​

ಈ ಯೋಜನೆಯ ಮೂಲಕ, ಐದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಎಲ್ಲ ಜಿಲ್ಲೆಗಳಲ್ಲಿ ನಿರ್ಣಾಯಕ ಆರೈಕೆ ಸೇವೆಗಳು ವಿಶೇಷ ನಿರ್ಣಾಯಕ ಆರೈಕೆ ಆಸ್ಪತ್ರೆ ಬ್ಲಾಕ್‌ಗಳ ಮೂಲಕ ಲಭ್ಯವಿದ್ದು, ಉಳಿದ ಜಿಲ್ಲೆಗಳು ರೆಫರಲ್ ಸೇವೆಗಳ ಮೂಲಕ ಒಳಗೊಂಡಿರುತ್ತವೆ. ದೇಶಾದ್ಯಂತ ಪ್ರಯೋಗಾಲಯಗಳ ಜಾಲದ ಮೂಲಕ ಜನರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸಂಪೂರ್ಣ ಶ್ರೇಣಿಯ ರೋಗನಿರ್ಣಯ ಸೇವೆಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ. ಎಲ್ಲ ಜಿಲ್ಲೆಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಅಭಯ ನೀಡಿದರು.

ಈ ಯೋಜನೆಯಡಿ, ಆರೋಗ್ಯಕ್ಕಾಗಿ ರಾಷ್ಟ್ರೀಯ ಸಂಸ್ಥೆ, ವೈರಾಲಜಿಗಾಗಿ ನಾಲ್ಕು ಹೊಸ ರಾಷ್ಟ್ರೀಯ ಸಂಸ್ಥೆಗಳು, WHO ಆಗ್ನೇಯ ಏಷ್ಯಾ ಪ್ರದೇಶಕ್ಕೆ ಒಂದು ಪ್ರಾದೇಶಿಕ ಸಂಶೋಧನಾ ವೇದಿಕೆ, ಒಂಬತ್ತು ಜೈವಿಕ ಸುರಕ್ಷತೆ ಮಟ್ಟ- III ಪ್ರಯೋಗಾಲಯಗಳು, ರೋಗ ನಿಯಂತ್ರಣಕ್ಕಾಗಿ ಐದು ಹೊಸ ಪ್ರಾದೇಶಿಕ ರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಇದೇ ವೇಳೆ ಪ್ರಕಟಿಸಿದರು.

For All Latest Updates

TAGGED:

ABOUT THE AUTHOR

...view details