ಕರ್ನಾಟಕ

karnataka

ETV Bharat / bharat

SansadTV: ದೇಶದ ಸಂಸದೀಯ ವ್ಯವಸ್ಥೆಗೆ ಹೊಸ ಸಂವಹನ ಮಾಧ್ಯಮ: ಸಂಸದ್‌ ಟಿವಿ ಲೋಕಾರ್ಪಣೆಯಲ್ಲಿ ಪ್ರಧಾನಿ ಮೋದಿ - ರಾಜ್ಯಸಭೆ

ಹೊಸದಾಗಿ ರೂಪಿಸಿರುವ ಸಂಸದ್‌ ಟಿವಿಯನ್ನು ಪ್ರಧಾನಿ, ಉಪರಾಷ್ಟ್ರಪತಿ ಹಾಗು ಲೋಕಸಭೆ ಸ್ಪೀಕರ್ ಜಂಟಿಯಾಗಿ ಇಂದು ಲೋಕಾರ್ಪಣೆ ಮಾಡಿದರು.

PM Modi launched Sansad TV in delhi today
ಪ್ರಧಾನಿ ಮೋದಿಯಿಂದ ನೂತನ ಸಂಸದ್‌ ಚಾನೆಲ್‌ ಲೋಕಾರ್ಪಣೆ

By

Published : Sep 15, 2021, 7:24 PM IST

ನವದೆಹಲಿ:ಲೋಕಸಭಾ ಟಿವಿ ಹಾಗೂ ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ ಹೊಸದಾಗಿ ರೂಪಿಸಿರುವ ಸಂಸದ್‌ ಟಿವಿ ಇಂದು ಲೋಕಾರ್ಪಣೆಗೊಂಡಿದೆ. ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಇದು ದೇಶದ ಸಂಸದೀಯ ವ್ಯವಸ್ಥೆಗೆ ಹೊಸ ಸಂವಹನ ಮಾಧ್ಯಮವಾಗಲಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಕೇಂದ್ರ ಸರ್ಕಾರ ದೇಶದ ಸಂಸದೀಯ ಚಾನೆಲ್ ಅನ್ನು ಅನಾವರಣಗೊಳಿಸಿದೆ. 'ಪ್ರಜಾಪ್ರಭುತ್ವಕ್ಕೆ ಮಹತ್ವ' ಎಂಬ ಧ್ಯೇಯವಾಕ್ಯದೊಂದಿಗೆ ವಾಹಿನಿಯನ್ನು ಬಿಡುಗಡೆ ಮಾಡಲಾಗಿದೆ.

ದೇಶದ ಪ್ರಜಾಪ್ರಭುತ್ವ ನೀತಿ ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಸಂಸದ್ ಟಿವಿ ಪ್ರಸ್ತುತಪಡಿಸಲಿದೆ.

ABOUT THE AUTHOR

...view details