ಕರ್ನಾಟಕ

karnataka

ETV Bharat / bharat

ಸಮೃದ್ಧ ದೇಶಕ್ಕೆ ರೈತರ ಕಲ್ಯಾಣವೇ ಪ್ರಧಾನ: ಕೇಂದ್ರ ಕೃಷಿ ಯೋಜನೆಗಳ ಹೊಗಳಿದ ಮೋದಿ - ಪ್ರಧಾನಮಂತ್ರಿ ಕಿಸಾನ್​ ಸಮ್ಮನ್​ ನಿಧಿ ಯೋಜನೆ

ಬೈಸಾಖಿ ಸುಗ್ಗಿಯ ಹಬ್ಬದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಕೆಲ ಯೋಜನೆಗಳ ಅಂಕಿ-ಅಂಶಗಳನ್ನು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಕೃಷಿ ಯೋಜನೆಗಳ ಹೊಗಳಿದ ಮೋದಿ
ಕೇಂದ್ರ ಕೃಷಿ ಯೋಜನೆಗಳ ಹೊಗಳಿದ ಮೋದಿ

By

Published : Apr 10, 2022, 5:14 PM IST

ನವದೆಹಲಿ: ರೈತರ ಏಳ್ಗೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಪ್ರಧಾನಿ ಮೋದಿ ಹೊಗಳಿದ್ದಾರೆ. ಪ್ರಧಾನಮಂತ್ರಿ ಕಿಸಾನ್​ ಸಮ್ಮನ್​ ನಿಧಿ ಸೇರಿ ಇತರ ಯೋಜನೆಗಳು ದೇಶಾದ್ಯಂತ ಕೋಟ್ಯಂತರ ರೈತರಿಗೆ ಹೊಸ ಶಕ್ತಿ ತಂಬಿದೆ. ರೈತರ ಕಲ್ಯಾಣವು ಸಮೃದ್ಧ ದೇಶದ ಪ್ರಮುಖ ಅಂಶ ಎಂದು ಅವರು ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ.

ಕೃಷಿಕ ಸಹೋದರ, ಸಹೋದರಿಯರ ಬಗ್ಗೆ ದೇಶ ಹೆಮ್ಮೆ ಪಡುತ್ತದೆ. ರೈತರು ಸಬಲರಾದಷ್ಟು ನವಭಾರತ ಮತ್ತಷ್ಟು ಸಮೃದ್ಧವಾಗಲಿದೆ. ಕೃಷಿ ಸಂಬಂಧಿತ ಅನೇಕ ಯೋಜನೆಗಳು ರೈತರಿಗೆ ಹೊಸ ಶಕ್ತಿ ತಂಬಿರುವುದಕ್ಕೆ ನನಗೆ ಸಂತೋಷವಾಗಿದೆ. ಪ್ರಧಾನಮಂತ್ರಿ ಕಿಸಾನ್​ ಸಮ್ಮನ್​ ನಿಧಿ ಯೋಜನೆಯಡಿ 11.3 ಕೋಟಿ ರೈತರು ನೇರ ಲಾಭವನ್ನು ಪಡೆಯುತ್ತಿದ್ದಾರೆ. ರೈತರ ಬ್ಯಾಂಕ್​​ ಖಾತೆಗಳಿಗೆ 1.82 ಲಕ್ಷ ಕೋಟಿ ರೂ. ನೇರವಾಗಿ ಜಮೆ ಮಾಡಲಾಗಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ವಾರ್ಷಿಕ 6 ಸಾವಿರ ರೂ.ದಂತೆ 1.30 ಲಕ್ಷ ಕೋಟಿ ರೈತರ ಖಾತೆಗಳಿಗೆ ಜಮೆಯಾಗಿದೆ. ಇದರ ಲಾಭ ವಿಶೇಷವಾಗಿ ಸಣ್ಣ ರೈತರಿಗೆ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಲ್ಲದೇ, ಕೃಷಿ ಮೂಲಸೌಕರ್ಯ ನಿಧಿಯಡಿ 1 ಲಕ್ಷ ಕೋಟಿ ಸಾಲದ ಸೌಲಭ್ಯ ಒದಗಿಸಲಾಗುತ್ತದೆ. ಇದರಡಿ 11,632 ಯೋಜನೆಗಳಿಗೆ 8,585 ಕೋಟಿ ರೂ. ಸಾಲ ನೀಡಲಾಗಿದೆ. ಕೃಷಿ ಸರಕುಗಳಿಗಾಗಿ ಆನ್​ಲೈನ್​ ಮಾರಾಟಕ್ಕಾಗಿ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್​) ವ್ಯವಸ್ಥೆ ಜಾರಿಗೆ ತರಲಾಗಿದೆ. ಇದುವರೆಗೆ ಇ-ನಾಮ್​ ಅಡಿ 1.73 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದು, ಒಟ್ಟಾರೆ 1.87 ಲಕ್ಷ ಕೋಟಿ ರೂ. ವ್ಯವಹಾರವಾಗಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ- ಆರ್​ಎಸ್​​ಎಸ್​ ಮುಖ್ಯಸ್ಥ ಭಾಗವತ್​ ಬಗ್ಗೆ ಆಕ್ಷೇಪಾರ್ಹ ಚಿತ್ರಗಳ ಫೋಸ್ಟ್​​

ABOUT THE AUTHOR

...view details