ಕರ್ನಾಟಕ

karnataka

ETV Bharat / bharat

ಉತ್ತರಾಖಂಡ​​ನಲ್ಲಿ ಪ್ರಧಾನಿ ಮೋದಿ.. 18 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ - ಪ್ರಧಾನಿ ಮೋದಿ ಡೆಹ್ರಾಡೂನ್​​

ಉತ್ತರಾಖಂಡ್​​ನಲ್ಲಿ ಇನ್ಮುಂದೆ 'ವಿಕಾಸ್​​​ ಕಿ ಗಂಗಾ' ಹರಿಯಲಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಬರೋಬ್ಬರಿ 18 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿದರು.

PM Modi in Dehradun
PM Modi in Dehradun

By

Published : Dec 4, 2021, 4:27 PM IST

ಡೆಹ್ರಾಡೂನ್​(ಉತ್ತರಾಖಂಡ):ಉತ್ತರಾಖಂಡ್​ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ 8,300 ಕೋಟಿ ರೂಪಾಯಿ ವೆಚ್ಚದ ದೆಹಲಿ - ಡೆಹ್ರಾಡೂನ್​ ಆರ್ಥಿಕ ಕಾರಿಡಾರ್ ಯೋಜನೆ ಸೇರಿದಂತೆ ಬರೊಬ್ಬರಿ 18 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.

18 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ನಮೋ ಚಾಲನೆ

ಉತ್ತರಾಖಂಡ್​ನ ಡೆಹ್ರಾಡೂನ್​​ನಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಐದು ವರ್ಷಗಳಲ್ಲಿ ಉತ್ತರಾಖಂಡದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ ಎಂದರು. ಇದೀಗ ಅಭಿವೃದ್ಧಿ ಯೋಜನೆಗಳಿಗೆ 18 ಸಾವಿರ ಕೋಟಿ ರೂ. ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಈಗಾಗಲೇ ಮೂರು ಹೊಸ ಮೆಡಿಕಲ್​ ಕಾಲೇಜ್​​ ಕಟ್ಟಲಾಗಿದ್ದು, ಇಂದು ಹರಿದ್ವಾರ್​ ಮೆಡಿಕಲ್​ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದ ನಮೋ, ಹಿಂದಿನ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿಕಾರ ನಡೆಸಿರುವ ಕಾಂಗ್ರೆಸ್ ಕೇವಲ ಸಮಯ ಹಾಳು ಮಾಡಿದ್ದು, ಇಲ್ಲಿನ ಅಭಿವೃದ್ಧಿ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದರು.

2007ರಿಂದ 2014ರ ಅವಧಿಯಲ್ಲಿ ಅಧಿಕಾರ ನಡೆಸಿರುವ ಕೇಂದ್ರ ಸರ್ಕಾರ ಉತ್ತರಾಖಂಡದಲ್ಲಿ 288 ಕಿಲೋ ಮೀಟರ್​ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದು, ಅದಕ್ಕಾಗಿ 600 ಕೋಟಿ ರೂ. ಖರ್ಚು ಮಾಡಿದೆ. ಆದರೆ ಕಳೆದ 7 ವರ್ಷಗಳಲ್ಲಿ ನಮ್ಮ ಸರ್ಕಾರ 2 ಸಾವಿರ ಕಿಲೋ ಮೀಟರ್​ ರಸ್ತೆ ನಿರ್ಮಿಸಿದ್ದು, ಅದಕ್ಕಾಗಿ 12,000 ಕೋಟಿ ರೂ. ವ್ಯಯ ಮಾಡಿದ್ದೇವೆ ಎಂದರು.

2022ರ ಆರಂಭದಲ್ಲೇ ಗೋವಾ, ಪಂಜಾಬ್​, ಉತ್ತರ ಪ್ರದೇಶ ರಾಜ್ಯಗಳ ಜೊತೆಗೆ ಉತ್ತರಾಖಂಡ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ನಮೋ ಅನೇಕ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿದರು.

ABOUT THE AUTHOR

...view details