ನವದೆಹಲಿ: ಕಾಂಗ್ರೆಸ್ ಪಕ್ಷ ಸೇರಿದಂತೆ ಪ್ರತಿಪಕ್ಷಗಳು ಹೊರನಡೆದ ನಡುವೆಯೂ ರಾಜ್ಯಸಭೆಯು ದೆಹಲಿಯ ರಾಷ್ಟ್ರೀಯ ರಾಜಧಾನಿ (ತಿದ್ದುಪಡಿ) ಮಸೂದೆ 2021 ಕ್ಕೆ ಅನುಮೋದನೆ ಪಡೆದಿದೆ.
ಮಸೂದೆಯನ್ನು ಪ್ರಜಾಪ್ರಭುತ್ವೇತರ ಮತ್ತು ಸಂವಿಧಾನೇತರ ಎಂದು ಕರೆದ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್, ’’ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕಾರ್ಯಗಳಿಗೆ ಹೆದರಿಜಿಎನ್‌ಸಿಟಿಡಿ (ಅಮ್ನೆಡ್‌ಮೆಂಟ್) ಮಸೂದೆ 2021ಕ್ಕೆ ಪ್ರಧಾನಿ ಮೋದಿ ಅಂಗೀಕಾರ ಪಡೆದುಕೊಂಡಿದ್ದಾರೆ. ಮಸೂದೆ ಅಂಗೀಕಾರವೇ ಇದೆಲ್ಲವನ್ನು ಹೇಳುತ್ತಿದೆ ಎಂದು ಹರಿಹಾಯ್ದಿದ್ದಾರೆ.