ನವದೆಹಲಿ: ಮಾರ್ಚ್ 28 ರಂದು ನಡೆಯಲಿರುವ ಈ ವರ್ಷದ ಮೂರನೇ ಮನ್ ಕಿ ಬಾತ್ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಿದ್ದಾರೆ.
"ಮಾರ್ಚ್ 28 ... ಈ ವರ್ಷದ ಮೂರನೇ ಮನ್ ಕಿ ಬಾತ್. ಆಸಕ್ತಿದಾಯಕ ವಿಷಯಗಳನ್ನು ಹೈಲೈಟ್ ಮಾಡಲು ಮತ್ತೊಂದು ಅವಕಾಶ. ಮೈಗೋ ಅಥವಾ ನಮೋ ಅಪ್ಲಿಕೇಶನ್‌ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ಪೋಸ್ಟ್ ಮಾಡಿ. ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ ಅಲ್ಲಿ ಹಾಕಿ" ಎಂದು ಪಿಎಂ ಮೋದಿ ಹೇಳಿದ್ದಾರೆ.