ನವದೆಹಲಿ :ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ಅಮೂಲ್ಯ ಸಲಹೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ. ಇದು ಅವರ ಭಾಷಣದ ಭಾಗವಾಗಲಿದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಇಂದು ಹೇಳಿದೆ. ಈ ಬಗ್ಗೆ ಪಿಎಂಒ ಟ್ವೀಟ್ ಮಾಡಿದೆ.
ಪಿಎಂಒ ಟ್ವೀಟ್

ನಿಮ್ಮ ಆಲೋಚನೆಗಳು ಕೆಂಪುಕೋಟೆಯ ಗೋಡೆಗಳಿಂದ ಪ್ರತಿಧ್ವನಿಸುತ್ತವೆ. ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ನೀವು ಯಾವ ಸಲಹೆಗಳನ್ನು ನೀಡುತ್ತೀರಿ? ಅವುಗಳನ್ನು mygovindiaದಲ್ಲಿ ಹಂಚಿಕೊಳ್ಳಿ ಎಂದು ಪಿಎಂಒ ಟ್ವೀಟ್ ಮಾಡಿದೆ.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ವಿವರಿಸುತ್ತಾರೆ ಎಂದು mygov ಪೋರ್ಟಲ್ ಹೇಳಿದೆ. ಯಾವಾಗಲೂ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಜನರನ್ನು ಆಹ್ವಾನಿಸಲಾಗುತ್ತದೆ. ಈ ಪೋರ್ಟಲ್ ಸರ್ಕಾರ ಮತ್ತು ನಾಗರಿಕರ ಭಾಗವಹಿಸುವಿಕೆ ನಡುವಿನ ವೇದಿಕೆಯಾಗಿದೆ.