ಕರ್ನಾಟಕ

karnataka

ETV Bharat / bharat

ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ -2021 ಉದ್ಘಾಟಿಸಿದ ಪಿಎಂ ಮೋದಿ - ಪ್ರಧಾನಿ ನರೇಂದ್ರ ಮೋದಿ

ನಾವು ಎದುರಿಸುತ್ತಿರುವ ಸವಾಲುಗಳು ಎಲ್ಲರಿಗೂ ತಿಳಿದಿರುವ ವಿಚಾರ. ತಮ್ಮ ಇತಿಮಿತಿಗಳನ್ನು ಮೀರಿ ಯೋಚಿಸಬೇಕಾಗಿದೆ. ಯುವಕರನ್ನು ಮುಂದೆ ತರಬೇಕಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

pm narendra modi
ಪ್ರಧಾನಿ ನರೇಂದ್ರ ಮೋದಿ

By

Published : Feb 11, 2021, 12:39 PM IST

ನವದೆಹಲಿ: ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2021 ಅನ್ನು ವಿಡಿಯೋ ಕಾನ್ಫರೆನ್ಸ್​​ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

‘ನಮ್ಮ ಸಾಮಾನ್ಯ ಭವಿಷ್ಯವನ್ನು ಮರು ವ್ಯಾಖ್ಯಾನಿಸುವುದು: ಎಲ್ಲರಿಗೂ ಸುರಕ್ಷಿತ ವಾತಾವರಣ ಕಲ್ಪಿಸುವುದು’ ಈ ಶೃಂಗಸಭೆಯ ಪ್ರಮುಖ ಧ್ಯೇಯವಾಗಿದೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸುಸ್ಥಿರ ಅಭಿವೃದ್ಧಿ ಕಾಯ್ದುಕೊಂಡಿದ್ದಕ್ಕಾಗಿ ಟಿ.ಇ.ಆರ್​.ಐ ಅನ್ನು ಅಭಿನಂದಿಸಿದರು. ಈ ರೀತಿಯ ಜಾಗತಿಕ ವೇದಿಕೆಗಳು ನಮ್ಮ ಪ್ರಸ್ತುತ ಮತ್ತು ಭವಿಷ್ಯಕ್ಕೆ ಅತಿ ಮುಖ್ಯವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮಾನವೀಯತೆಯ ಪ್ರಗತಿ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ಈ ಎರಡು ವಿಷಯಗಳು ವ್ಯಾಖ್ಯಾನಿಸುತ್ತವೆ. ಮೊದಲನೇಯದು ನಮ್ಮ ಜನರ ಆರೋಗ್ಯ. ಎರಡನೇಯದು ನಮ್ಮ ಗ್ರಹದ ಆರೋಗ್ಯ. ಎರಡೂ ಪರಸ್ಪರ ಸಂಬಂಧ ಹೊಂದಿದ್ದು, ಈ ಎರಡೂ ವಿಷಯಗಳು ಅತಿ ಮಹತ್ವ ಹೊಂದಿವೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ:ದೇಶದ ಸಾರ್ವಭೌಮತ್ವ ರಕ್ಷಣೆಗೆ ಯಾವುದೇ ಸವಾಲು ಎದುರಿಸಲು ಸೇನೆ ಸಿದ್ಧ: ರಾಜನಾಥ್ ಸಿಂಗ್

ನಾವು ಎದುರಿಸುತ್ತಿರುವ ಸವಾಲುಗಳು ಎಲ್ಲರಿಗೂ ತಿಳಿದಿರುವ ವಿಚಾರ. ತಮ್ಮ ಇತಿಮಿತಿಗಳನ್ನು ಮೀರಿ ಯೋಚಿಸಬೇಕಾಗಿದೆ. ಯುವಕರನ್ನು ಮುಂದೆ ತರಬೇಕಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಕೆಲಸ ಮಾಡಬೇಕಾಗಿದೆ ಎಂದು ಪ್ರತಿಪಾದಿಸಿದರು. ಹವಾಮಾನ ವೈಪರೀತ್ಯದೆಡೆಗೂ ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ABOUT THE AUTHOR

...view details