ಭೋಪಾಲ್(ಮಧ್ಯಪ್ರದೇಶ): ಆಧುನಿಕ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ಭಾರತ ದಾಖಲೆಯ ಮಟ್ಟದಲ್ಲಿ ಹೂಡಿಕೆ ಹರಿದು ಮಾಡುತ್ತಿದ್ದು, ಯೋಜನೆಗಳು ಯಾವುದೇ ಕಾರಣಕ್ಕೂ ವಿಳಂಬವಾಗದ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಿಳಿಸಿದರು.
ಭೋಪಾಲ್ನಲ್ಲಿ ರಾಣಿ ಕಮಲಾಪತಿ ರೈಲು (Rani Kamalapati station Bhopal) ನಿಲ್ದಾಣ ಉದ್ಘಾಟನೆ ಮಾಡಿ ಮಾತನಾಡಿದ ಮೋದಿ, ಈ ಐತಿಹಾಸಿಕ ರೈಲ್ವೆ ನಿಲ್ದಾಣ ಪುನರ್ ಅಭಿವೃದ್ಧಿ ಮಾಡಿರುವುದು ಮಾತ್ರವಲ್ಲದೇ ಗಿನ್ನೋರ್ಗಢದ (Gond Queen Rani Kamalapati) ರಾಣಿ ಕಮಲಾಪತಿ ಹೆಸರನ್ನು ನಿಲ್ದಾಣಕ್ಕೆ ಇಡುವ ಮೂಲಕ ಅವರ ಹೆಸರು ಮತ್ತಷ್ಟು ಅಜರಾಮರಗೊಳಿಸಲಾಗಿದೆ ಎಂದರು.
ಸ್ವತಂತ್ರ ಭಾರತದ ನಂತರ ಇದೇ ಮೊದಲ ಸಲ ಇಷ್ಟೊಂದು ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಪುನರ್ ಅಭಿವೃದ್ಧಿ ಮಾಡಲಾಗಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಭಾರತೀಯ ರೈಲ್ವೆಯಲ್ಲಿ (Indian Railways) ಕೆಲಸ ಮಾಡುವ ಉದ್ಯೋಗಿಗಳು ಶಪಿಸುವಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಕಿಕ್ಕಿರಿದ ನಿಲ್ದಾಣಗಳು, ಕೊಳಕು ರೈಲು, ಆಸನ-ಊಟ ಮಾಡುವ ಸೌಲಭ್ಯಗಳ ಅನಾನುಕೂಲತೆ ಕಂಡು ಬರುತ್ತಿತ್ತು. ಆದರೆ ಇದೀಗ ಎಲ್ಲವೂ ಬದಲಾಗಿದೆ. ರೈಲಿನಲ್ಲಿ ಪ್ರಯಾಣ ಬೆಳೆಸಲು ಇದೀಗ ಎಲ್ಲರೂ ಉತ್ಸುಕರಾಗಿದ್ದು, ಎಲ್ಲವೂ ಬದಲಾಗಿದೆ ಎಂದರು.