ಕರ್ನಾಟಕ

karnataka

ETV Bharat / bharat

ದೇಶದ 75 ಕಡೆ ಡಿಜಿಟಲ್​ ಬ್ಯಾಂಕಿಂಗ್​ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ - DBUs of Jammu and Kashmir Bank

ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ 75 ಕಡೆಗಳಲ್ಲಿ ಡಿಜಿಟಲ್​ ಬ್ಯಾಂಕಿಂಗ್​ ಘಟಕಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು.

pm-modi-inaugurates-75-digital-banking-units
ಡಿಜಿಟಲ್​ ಬ್ಯಾಂಕಿಂಗ್​ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

By

Published : Oct 16, 2022, 1:03 PM IST

ಶ್ರೀನಗರ: ಡಿಜಿಟಲ್​ ಇಂಡಿಯಾದ ಭಾಗವಾಗಿ ಮತ್ತು ಡಿಜಿಟಲೀಕರಣದಲ್ಲಿ ಭಾರತ ಮುಂದಿದ್ದು, ದೇಶ ಇನ್ನಷ್ಟು ತಂತ್ರಜ್ಞಾನದೆಡೆಗೆ ಸಾಗಲು ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸೇರಿದಂತೆ ದೇಶದ 75 ಕಡೆ ಡಿಜಿಟಲ್​ ಬ್ಯಾಂಕಿಂಗ್​ ಘಟಕಗಳ ಆರಂಭಕ್ಕೆ ಚಾಲನೆ ಭಾನುವಾರ ನೀಡಿದರು.

ಕಣಿವೆ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕಿಂಗ್​ ಸೇವೆ ಸುಲಭಗೊಳಿಸಲು ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಎಸ್‌ಎಸ್‌ಐ ಶಾಖೆ ಮತ್ತು ಜಮ್ಮುವಿನ ಚನ್ನಿ ರಾಮ ಶಾಖೆಯಲ್ಲಿ ಡಿಜಿಟಲ್​ ಘಟಕಗಳಿಗೆ ಚಾಲನೆ ನೀಡಲಾಗಿದೆ.

2022- 23ರ ಕೇಂದ್ರ ಬಜೆಟ್‌ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ ದೇಶದ ಹಲವು ಜಿಲ್ಲೆಗಳಲ್ಲಿ 75 ಡಿಜಿಟಲ್​ ಬ್ಯಾಂಕಿಂಗ್​ ಯುನಿಟ್​(ಡಿಯುಬಿ) ಸ್ಥಾಪಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು.

ಡಿಜಿಟಲ್ ಬ್ಯಾಂಕಿಂಗ್‌ ಘಟಕದ ಲಾಭವೇನು?:ಡಿಜಿಟಲ್​ ಬಳಕೆ ದೇಶದ ಮೂಲೆ ಮೂಲೆಯನ್ನು ತಲುಪಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಸಾರ್ವಜನಿಕ ವಲಯದ 11, ಖಾಸಗಿ ವಲಯದ 12 ಮತ್ತು ಒಂದು ಸ್ಥಳೀಯ ಬ್ಯಾಂಕ್ ಅನ್ನು ಇದರಡಿ ಬಳಸಿಕೊಳ್ಳಲಾಗಿದೆ. ಡಿಬಿಯುಗಳು ಜನರಿಗೆ ಉಳಿತಾಯ ಖಾತೆ ತೆರೆಯುವುದು, ಖಾತೆಯ ಬ್ಯಾಲೆನ್ಸ್ ಚೆಕ್, ಪ್ರಿಂಟಿಂಗ್ ಪಾಸ್‌ಬುಕ್, ಹಣ ವರ್ಗಾವಣೆ, ಸ್ಥಿರ ಠೇವಣಿ ಹೂಡಿಕೆಗಳು, ಸಾಲದ ಅರ್ಜಿಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಿಗೆ ಅರ್ಜಿ ಮತ್ತು ಬಿಲ್, ತೆರಿಗೆ ಪಾವತಿಗಳಂತಹ ವಿವಿಧ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಇದು ಒದಗಿಸುತ್ತದೆ.

ಡಿಜಿಟಲ್​ ಬ್ಯಾಂಕಿಂಗ್​ ಘಟಕಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ವೇಳೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ಆರ್ಥಿಕ ಒಳಗೊಳ್ಳುವಿಕೆಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ದೃಢ ಮಾಡಲು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನಲ್ಲಿ ಎರಡು ಘಟಕ ಸೇರಿದಂತೆ ದೇಶಾದ್ಯಂತ ವಿವಿಧ ಬ್ಯಾಂಕ್‌ಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಉದ್ಘಾಟಿಸಲಾಗಿದೆ. ಇದರಿಂದ ಜನರು ಬ್ಯಾಂಕಿಂಗ್​ ಸೇವೆಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ ಎಂದರು.

ಓದಿ:ನೀವು ಒಂದು ಮದುವೆ ಆಗಿ, ಮೂವರನ್ನು ಇಟ್ಕೊಳ್ತೀರಿ... ಹಿಂದೂಗಳ ವಿರುದ್ಧ ಓವೈಸಿ ಪಕ್ಷದ ಅಧ್ಯಕ್ಷ ವಿವಾದಿತ ಹೇಳಿಕೆ

ABOUT THE AUTHOR

...view details