ವಾರಣಾಸಿ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ 870 ಕೋಟಿ ರೂಪಾಯಿಗಳ 22 ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಉದ್ಘಾಟನೆಗೂ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಮೋದಿ ಪರಿಶೀಲಿಸಿದರು. 22 ಅಭಿವೃದ್ಧಿ ಯೋಜನೆಗಳ ಪೈಕಿ ವಾರಾಣಸಿಯ ಕರ್ಖಿಯಾನ್‌ನಲ್ಲಿರುವ ಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಫುಡ್ ಪಾರ್ಕ್‌ನಲ್ಲಿ 'ಬನಾಸ್ ಡೈರಿ ಸಂಕುಲ್' ಮುಖ್ಯವಾಗಿದೆ. ಸುಮಾರು 475 ಕೋಟಿ ರೂಪಾಯಿ ವೆಚ್ಚದಲ್ಲಿ 30 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಡೈರಿ ದಿನಕ್ಕೆ 5 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸೌಲಭ್ಯವನ್ನು ಹೊಂದಲಿದೆ.
ಅಷ್ಟೇ ಅಲ್ಲ, ಬನಾಸ್ ಡೈರಿಗೆ ಸಂಬಂಧಿಸಿದ 1.7 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ಸುಮಾರು 35 ಕೋಟಿ ರೂಪಾಯಿ ಬೋನಸ್ ಅನ್ನು ಆನ್ಲೈನ್ ಮೂಲಕ ಪಿಎಂ ವರ್ಗಾಯಿಸಿದ್ದಾರೆ.