ನವದೆಹಲಿ:ಇಂದು ಮಣಿಪುರ, ತ್ರಿಪುರ ಮತ್ತು ಮೇಘಾಲಯದ ಜನರಿಗೆ ರಾಜ್ಯೋತ್ಸವದ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
ಮಣಿಪುರ, ತ್ರಿಪುರ, ಮೇಘಾಲಯಕ್ಕೆ ರಾಜ್ಯೋತ್ಸವದ ದಿನ: ಶುಭಾಶಯ ತಿಳಿಸಿದ ಪ್ರಧಾನಿ - PM Modi greets people on statehood days of Manipur, Tripura, Meghalaya
ಮಣಿಪುರ, ತ್ರಿಪುರ ಮತ್ತು ಮೇಘಾಲಯದ ರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
"ಮಣಿಪುರದ ಜನರಿಗೆ ರಾಜ್ಯ ದಿನಾಚರಣೆಯ ಶುಭಾಶಯಗಳು. ರಾಷ್ಟ್ರೀಯ ಅಭಿವೃದ್ಧಿಗೆ ಭಾರತ ನೀಡಿದ ಕೊಡುಗೆಯ ಬಗ್ಗೆ ಹೆಮ್ಮೆ ಇದೆ. ನಾವೀನ್ಯತೆ ಮತ್ತು ಕ್ರೀಡಾ ಪ್ರತಿಭೆಗಳಿಂದ ರಾಜ್ಯವು ಶಕ್ತಿಶಾಲಿಯಾಗಿದೆ. ರಾಜ್ಯವು ಪ್ರಗತಿಯತ್ತ ಸಾಗುವ ಪ್ರಯಾಣದಲ್ಲಿದೆ. ಮೇಘಾಲಯದ ಯುವಕರು ಸೃಜನಶೀಲ ಮತ್ತು ಉದ್ಯಮಶೀಲರಾಗಿದ್ದಾರೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
"ತ್ರಿಪುರದ ಜನರ ಸಂಸ್ಕೃತಿ ಮತ್ತು ಆತ್ಮೀಯ ಸ್ವಭಾವವನ್ನು ಭಾರತದಾದ್ಯಂತ ಮೆಚ್ಚಲಾಗಿದೆ. ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದೆ. ಅದೇ ಮನೋಭಾವ ಮುಂದುವರಿಯಲಿ. ರಾಜ್ಯವು ಗಮನಾರ್ಹವಾದ ದಯೆ ಮತ್ತು ಸಹೋದರತ್ವದ ಮನೋಭಾವಕ್ಕೆ ಹೆಸರುವಾಸಿಯಾಗಿದೆ " ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.