ಕರ್ನಾಟಕ

karnataka

ETV Bharat / bharat

ನವರಾತ್ರಿ ಉತ್ಸವಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ - ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್

ನವರಾತ್ರಿ ಪ್ರತಿಯೊಬ್ಬರ ಜೀವನದಲ್ಲಿ ಶಕ್ತಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಶುಭಕೋರಿದ್ದಾರೆ.

PM Modi greets people on Navratri
ನವರಾತ್ರಿ ಉತ್ಸವಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ

By

Published : Oct 7, 2021, 10:06 AM IST

ನವದೆಹಲಿ:ನವರಾತ್ರಿ ಸಂಭ್ರಮ ದೇಶಾದ್ಯಂತ ಮನೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಶುಭಾಶಯ ಕೋರಿದ್ದಾರೆ. ಈ ನವರಾತ್ರಿ ಎಲ್ಲರಲ್ಲೂ ಶಕ್ತಿ, ಆರೋಗ್ಯ, ಸಮೃದ್ಧಿಯನ್ನು ನೀಡಲಿ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ಮುಂದಿನ ದಿನಗಳು ಜಗತ್ ಜನನಿಯ ಪೂಜೆಗೆ ನಮ್ಮನ್ನು ಅರ್ಪಿಸಿಕೊಳ್ಳುತ್ತೇವೆ. ನವರಾತ್ರಿ ಪ್ರತಿಯೊಬ್ಬರ ಜೀವನದಲ್ಲಿ ಶಕ್ತಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ' ಎಂದು ಹೇಳಿದರು.

ಸಿಎಂ ಶುಭಾಶಯ

ನಾಡಿನ ಜನತೆ ಸಿಎಂ ಬಸವರಾಜ ಬೊಮ್ಮಾಯಿ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ ದಸರಾ ನಾಡಹಬ್ಬದ ಹಾರ್ದಿಕ ಶುಭಕಾಮನೆಗಳು. ನಾಡದೇವತೆ ಚಾಮುಂಡೇಶ್ವರಿ ಎಲ್ಲರಿಗೂ ಸುಖ, ಸಂತೋಷ, ಆರೋಗ್ಯಗಳನ್ನು ಅನುಗ್ರಹಿಸಲಿ ಎಂದು ಆಶಿಸಿದ್ದಾರೆ.

ಇದರ ಜೊತೆಗೆ ಸಾಂಕ್ರಾಮಿಕದ ಕರಿನೆರಳು ದೂರಸರಿದು, ಸಂಭ್ರಮ ಸಮೃದ್ಧಿಗಳ ಹೊಂಬೆಳಕು ಮೂಡಲಿ ಎಂದು ಹಾರೈಸುತ್ತೇನೆ. ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ಸಿಎಂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details