ಕರ್ನಾಟಕ

karnataka

ETV Bharat / bharat

ದೇಶದ ಜನತೆಗೆ ದಸರಾ ಶುಭಾಶಯ ಕೋರಿದ ಪ್ರಧಾನಿ ಮೋದಿ - Vijayadashami celebrated all over India

ಈ ಶುಭ ಸಂದರ್ಭವು ಪ್ರತಿಯೊಬ್ಬರ ಜೀವನದಲ್ಲಿ ಧೈರ್ಯ, ಸಂಯಮ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ದೇಶದ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ.

ದೇಶದ ಜನತೆಗೆ ದಸರಾ ಶುಭಾಶಯ ಕೋರಿದ ಪ್ರಧಾನಿ ಮೋದಿ
ದೇಶದ ಜನತೆಗೆ ದಸರಾ ಶುಭಾಶಯ ಕೋರಿದ ಪ್ರಧಾನಿ ಮೋದಿ

By

Published : Oct 5, 2022, 2:03 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ. ಎಲ್ಲರಿಗೂ ಧೈರ್ಯ, ಸಂಯಮ ಮತ್ತು ಸಕಾರಾತ್ಮಕ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಟ್ವೀಟ್​ ಮೂಲಕ ಶುಭಾಶಯ ಕೋರಿದ್ದಾರೆ.

"ವಿಜಯದ ಸಂಕೇತವಾದ ವಿಜಯದಶಮಿಯಂದು ಎಲ್ಲಾ ದೇಶವಾಸಿಗಳಿಗೆ ಹಬ್ಬದ ಶುಭಾಶಯ. ಈ ಶುಭ ಸಂದರ್ಭವು ಪ್ರತಿಯೊಬ್ಬರ ಜೀವನದಲ್ಲಿ ಧೈರ್ಯ, ಸಂಯಮ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲಿ ಎಂದು ನಾನು ಆಶಿಸುತ್ತೇನೆ" ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.

ಇದಕ್ಕೂ ಮುನ್ನ, ರಾಷ್ಟ್ರಪತಿ ದ್ರೌಪದಿ ಮುರ್ಮು, ದಸರಾ ಮುನ್ನಾದಿನದ ಸಂದೇಶದಲ್ಲಿ "ವಿಜಯದಶಮಿಯ ಶುಭ ಸಂದರ್ಭದಲ್ಲಿ, ಎಲ್ಲಾ ನಾಗರಿಕರಿಗೆ ನನ್ನ ಹುತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ" ಎಂದು ಹೇಳಿದ್ದಾರೆ.

ಮುರ್ಮು ಮಾತನಾಡಿ, ವಿಜಯದಶಮಿ ಹಬ್ಬವನ್ನು ಭಾರತದಾದ್ಯಂತ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಇದನ್ನು 'ದಸರಾ' ಎಂದು ಆಚರಿಸಲಾಗುತ್ತದೆ. ರಾವಣನ ವಿರುದ್ಧ ಶ್ರೀರಾಮ ವಿಜಯವನ್ನು ಸಾಧಿಸಿದಕ್ಕಾಗಿ 'ರಾವಣ ದಹನ ಮಾಡಲಾಗುತ್ತದೆ. ಶ್ರೀರಾಮನ ಆದರ್ಶ, ನಡತೆ ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಸಿಎಂ.. ಮೆರವಣಿಗೆಗೆ ಚಾಲನೆ

ಪೂರ್ವ ಭಾರತದಲ್ಲಿ, ಈ ದಿನದಂದು 'ದುರ್ಗಾ ವಿಗ್ರಹ ನಿಮಜ್ಜನ' ಸಮಾರಂಭವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ಹೀಗಾಗಿ, ಈ ಹಬ್ಬವು ಭಾರತದ ಸಾಂಸ್ಕೃತಿಕ ಏಕತೆಗೆ ಉದಾಹರಣೆಯಾಗಿದೆ. ಈ ಹಬ್ಬವು ಶಾಶ್ವತ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ನಮಗೆ ಸ್ಫೂರ್ತಿ ನೀಡಲಿ ಎಂದು ನಾನು ಬಯಸುತ್ತೇನೆ. ನೈತಿಕತೆ, ಸತ್ಯ, ಒಳ್ಳೆಯ, ಶಾಂತಿ ಮತ್ತು ಸೌಹಾರ್ದತೆಯ ಜೀವನವನ್ನು ಎಲ್ಲರೂ ನಡೆಸಿ ಎಂದು ಅವರು ಸಲಹೆ ನೀಡಿದ್ದಾರೆ

ಹಿಮಾಚಲ ಪ್ರದೇಶದ ಧಾಲ್ಪುರ್ ಗ್ರೌಂಡ್ ಕುಲುಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಅಲ್ಲಿ ಕುಲ್ಲು ದಸರಾ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕುಲು ದಸರಾ ಉತ್ಸವದಲ್ಲಿ ಭಾಗಿಯಾಗಿ, 300 ಕ್ಕೂ ಹೆಚ್ಚು ದೇವತೆಗಳ ಈ ವಿಶಿಷ್ಟ ರಥಯಾತ್ರೆಗೆ ಸಾಕ್ಷಿಯಾಗಿದ್ದಾರೆ. ದೇಶದ ಪ್ರಧಾನಿ ಕುಲ್ಲು ದಸರಾ ಆಚರಣೆಯಲ್ಲಿ ಭಾಗವಹಿಸಿರುವುದು ಇದೇ ಮೊದಲು.

ABOUT THE AUTHOR

...view details