ಗಾಂಧಿನಗರ(ಗುಜರಾತ್) :ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರಿಗೆ ಪ್ರಧಾನಿ ಮೋದಿ ಗುಜರಾತಿ ಹೆಸರಿಟ್ಟಿದ್ದಾರೆ. ಬುಧವಾರ ಗುಜರಾತ್ನ ಗಾಂಧಿನಗರದಲ್ಲಿ ನಡೆದ ಜಾಗತಿಕ ಆಯುಷ್ ಮತ್ತು ಆವಿಷ್ಕಾರ ಸಮ್ಮೇಳನದಲ್ಲಿ ಈ ವಿದ್ಯಮಾನ ನಡೆದಿದೆ.
ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬೆಳಗ್ಗೆ ಭೇಟಿಯಾದ ಸಂದರ್ಭದಲ್ಲಿ ಡಾ.ಟೆಡ್ರೊಸ್ ನಾನು ಪಕ್ಕಾ ಗುಜರಾತಿ ಆಗಿದ್ದೇನೆ. ನೀವು ನನಗೆ ಗುಜರಾತಿ ಹೆಸರಿಡಿ ಎಂದು ಕೇಳಿದರು. ಅದು ನನಗೆ ಈಗ ನೆನಪಿಗೆ ಬರುತ್ತಿದೆ. ನಾನು ಗುಜರಾತಿಯಾಗಿ ಡಾ.ಟೆಡ್ರೊಸ್ ಅವರನ್ನು ತುಳಸಿಭಾಯ್ ಅಂತಾ ಕರೆಯುತ್ತೇನೆ ಎಂದು ಹೇಳಿದರು. 'ತುಳಸಿಭಾಯ್' ಎಂದು ಹೆಸರಿಡುತ್ತೇನೆ ಎಂದು ಮೋದಿ ಹೇಳುತ್ತಿದ್ದಂತೆ ಇಡೀ ಸಭೆಯು ನಗುವಿನ ಅಲೆಯಲ್ಲಿ ತೇಲಿತು.