ಬೆಂಗಳೂರು:ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಹೆಚ್‌ಎಎಲ್) ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರು ಯುದ್ಧ ವಿಮಾನ ತೇಜಸ್‌ನಲ್ಲಿ ಹಾರಾಟ ನಡೆಸಿದರು. ರಕ್ಷಣಾ ಉತ್ಪನ್ನಗಳ ಸ್ವದೇಶಿ ಉತ್ಪಾದನೆಗೆ ಮೋದಿ ಸರ್ಕಾರ ಒತ್ತು ನೀಡುತ್ತಲೇ ಇದೆ. ಭಾರತದಲ್ಲಿ ರಕ್ಷಣಾ ಉಪಕರಣಗಳ ಉತ್ಪಾದನೆ ಮತ್ತು ರಫ್ತಿಗೆ ಅವರ ಸರ್ಕಾರವು ಹೇಗೆ ಉತ್ತೇಜನ ನೀಡಿದೆ ಎಂಬುದನ್ನು ಅವರು ಆಗಾಗ ಒತ್ತಿ ಹೇಳುತ್ತಿರುತ್ತಾರೆ.
ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಇಂದು ತೇಜಸ್‌ನಲ್ಲಿ ಹಾರುತ್ತಿರುವಾಗ, ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ನಾವು ಸ್ವಾವಲಂಬನೆಯ ಕ್ಷೇತ್ರದಲ್ಲಿ ವಿಶ್ವದ ಯಾರಿಗಿಂತ ಕಡಿಮೆಯಿಲ್ಲ ಎಂದು ನಾನು ಬಹಳ ಹೆಮ್ಮೆಯಿಂದ ಹೇಳಬಲ್ಲೆ. ಭಾರತೀಯ ವಾಯುಪಡೆ, DRDO ಮತ್ತು HAL ಹಾಗೂ ಎಲ್ಲಾ ಭಾರತೀಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಅನೇಕ ದೇಶಗಳು ತೇಜಸ್ ಖರೀದಿಸಲು ಬಯಸುತ್ತವೆ:ತೇಜಸ್ ಲಘು ಯುದ್ಧ ವಿಮಾನವನ್ನು ಖರೀದಿಸಲು ಹಲವಾರು ದೇಶಗಳು ಆಸಕ್ತಿ ತೋರಿಸಿವೆ ಮತ್ತು US ರಕ್ಷಣಾ ದೈತ್ಯ GE ಏರೋಸ್ಪೇಸ್ MK-II ತೇಜಸ್‌ಗಾಗಿ ಜಂಟಿ ಎಂಜಿನ್‌ಗಳನ್ನು ಉತ್ಪಾದಿಸಲು HAL ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. 2022-2023ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ 15,920 ಕೋಟಿ ರೂ.ಗೆ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವರ್ಷದ ಏಪ್ರಿಲ್‌ನಲ್ಲಿ ಹೇಳಿದ್ದರು. ಇದು ದೇಶಕ್ಕೆ ಅಪೂರ್ವ ಸಾಧನೆಯಾಗಿದೆ ಎಂದು ಹೇಳಿದ್ದರು.