ಉನಾ(ಹಿಮಾಚಲ ಪ್ರದೇಶ) : ಇಂದು ಪ್ರಧಾನಿ ಮೋದಿ ಹಿಮಾಚಲ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಇಂದು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಉನಾ ಜಿಲ್ಲೆಯ ಅಂಬ್-ಅಂಡೌರಾ ರೈಲ್ವೆ ನಿಲ್ದಾಣದಿಂದ ನವದೆಹಲಿಗೆ ಹೋಗುವ ಈ ರೈಲಿನ ಬುಕಿಂಗ್ ನಾಳೆಯಿಂದ ಅಂದರೆ ಶುಕ್ರವಾರದಿಂದ ಪ್ರಾರಂಭವಾಗಲಿದೆ.
ಈ ರೈಲಿನ ವೇಗ ಗಂಟೆಗೆ 86 ಕಿ.ಮೀ. ಇದೆ. ಉನಾದಿಂದ ದೆಹಲಿಗೆ ಹೋಗುವ ಪ್ರಯಾಣಿಕರು ಇದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ರೈಲು ಅಂಬ್-ಅಂಡೌರಾದಿಂದ 1 ಗಂಟೆಗೆ ಹೊರಟು ದೆಹಲಿಯನ್ನು 6.25 ಗಂಟೆಗೆ ತಲುಪುತ್ತದೆ. ಆನಂದಪುರ ಸಾಹಿಬ್, ಅಂಬಾಲಾ ಮತ್ತು ಚಂಡೀಗಢ ಅದರ ನಿಲುಗಡೆ ನಿಲ್ದಾಣಗಳಾಗಿವೆ. ಇದು ದೇಶದಲ್ಲೇ ತಯಾರಾದ ಅರೆ ವೇಗದ ರೈಲು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಗ್ರೀನ್ ಸಿಗ್ನಲ್ ಇದು ದೇಶದಲ್ಲಿ ಓಡುತ್ತಿರುವ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ಇದು ದೆಹಲಿಯಿಂದ ಹಿಮಾಚಲದ ಅಂಬ್ ಅಂಡೌರಾಗೆ ವಾರದಲ್ಲಿ 6 ದಿನಗಳು ಚಲಿಸುತ್ತದೆ. ಈ ಸಮಯದಲ್ಲಿ ಈ ರೈಲು ದೆಹಲಿಯಿಂದ ಹರಿಯಾಣದ ಅಂಬಾಲಾಗೆ, ನಂತರ ಚಂಡೀಗಢ ಮತ್ತು ಹಿಮಾಚಲದ ಉನಾ ಮೂಲಕ ಅಂಬ್ ಅಂಡೌರಾಗೆ ತಲುಪತ್ತದೆ.
ದೇಶದ ಮೊದಲ ಸೆಮಿ ಬುಲೆಟ್ ಅಥವಾ ಸೆಮಿ-ಹೈ ಸ್ಪೀಡ್ ರೈಲಿನ ಹೆಸರು T-18 ಆಗಿದ್ದು, ಇದನ್ನು ವಂದೇ ಭಾರತ್ ಎಕ್ಸ್ ಪ್ರೆಸ್ ಎಂದು ಮರುನಾಮಕರಣ ಮಾಡಲಾಯಿತು. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಈ 16 ಬೋಗಿಗಳ ರೈಲು ದೇಶದಲ್ಲೇ ಅತ್ಯಂತ ಅತ್ಯಾಧುನಿಕ ರೈಲು ಆಗಿದೆ. ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ದೆಹಲಿ ಮತ್ತು ವಾರಣಾಸಿ ನಡುವೆ 15 ಫೆಬ್ರವರಿ 2019 ರಂದು ಓಡಿಸಲಾಯಿತು. ಈ ರೈಲಿನ ವೇಗ ಗಂಟೆಗೆ 180 ಕಿಲೋಮೀಟರ್ವರೆಗೆ ಇದೆ.
ವಂದೇ ಭಾರತ್‌ನ ವಿಶೇಷತೆ: 2019 ರಲ್ಲಿ ಪ್ರಾರಂಭವಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಗವು ಮೊದಲ ವೈಶಿಷ್ಟ್ಯವಾಗಿದೆ. ಈ ರೈಲು 0 ರಿಂದ 100 ಕಿಮೀ ವೇಗವನ್ನು 50 ರಿಂದ 55 ಸೆಕೆಂಡುಗಳಲ್ಲಿ ಮುಟ್ಟುತ್ತದೆ. ಅದರ ಗರಿಷ್ಠ ವೇಗ ಗಂಟೆಗೆ 180 ಕಿ.ಮೀ. ಆಗಿದೆ. ಇದು ದೇಶದ ಅತ್ಯಂತ ವೇಗದ ರೈಲು, ಆದ್ದರಿಂದ ಇದನ್ನು ಭಾರತದ ಬುಲೆಟ್ ಎಂದೂ ಕರೆಯಬಹುದು. ಈ ವೇಗದಿಂದಾಗಿ, ಪ್ರಯಾಣಿಕರು 25 ರಿಂದ 45 ರಷ್ಟು ಕಡಿಮೆ ಸಮಯದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪುತ್ತಾರೆ. ಆದರೆ ವೇಗದ ಹೊರತಾಗಿ ಈ ರೈಲಿನ ಹಲವು ವಿಶೇಷತೆಗಳೂ ಇವೆ.
ಓದಿ:100 ಕಿಮೀ ವೇಗದಲ್ಲಿ ಚಲಿಸಿ.. ವ್ಹೀಲ್ ಜಾಮ್ ಆಗಿ ನಿಂತ ವಂದೇ ಭಾರತ್ ರೈಲು