ಗೋರಖ್‌ಪುರ (ಉತ್ತರ ಪ್ರದೇಶ):ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗೋರಖ್‌ಪುರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ''ದೇಶಾದ್ಯಂತದ ನಾಯಕರು ತಮ್ಮ ಪ್ರದೇಶದಿಂದ ವಂದೇ ಭಾರತ್ ರೈಲುಗಳನ್ನು ಓಡಿಸುವಂತೆ ವಿನಂತಿಸುತ್ತಿದ್ದಾರೆ'' ಎಂದು ಪ್ರಧಾನಿ ಮೋದಿ ಹೇಳಿದರು.
ವಂದೇ ಭಾರತ್ ಮಧ್ಯಮ ವರ್ಗದವರಿಗೆ ವರದಾನ:''ವಂದೇ ಭಾರತ್ ರೈಲು ದೇಶದ ಮಧ್ಯಮ ವರ್ಗದವರಿಗೆ ಸೌಕರ್ಯಗಳನ್ನು ಹೊಸ ವಿಮಾನದಂತಹ ಅನುಭವ ನೀಡಿದೆ. ಇಂದು ದೇಶದ ಮೂಲೆ ಮೂಲೆಗಳಿಂದ ನಾಯಕರು ನನಗೆ ಪತ್ರ ಬರೆಯುತ್ತಿದ್ದಾರೆ. ನಮ್ಮ ಪ್ರದೇಶದಿಂದ ವಂದೇ ಭಾರತ ರೈಲು ಓಡಿಸಬೇಕು ಎಂದು ಕೇಳುತ್ತಿದ್ದಾರೆ. ವಂದೇ ಭಾರತ್ ಮಧ್ಯಮ ವರ್ಗದವರಿಗೆ ವರದಾನವಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ವಂದೇ ಭಾರತ್ ರೈಲಿನಿಂದ ಎರಡು ಗಂಟೆ ಉಳಿಯುತ್ತೆ:ರೈಲ್ವೆ ಮಂಡಳಿಯ ಅಧ್ಯಕ್ಷ, ಸಿಇಒ ಅನಿಲ್ ಕುಮಾರ್ ಲಹೋಟಿ ಮಾತನಾಡಿ, ''ವಂದೇ ಭಾರತ್ ರೈಲಿನ ಸಮಯವು ಅನುಕೂಲಕರವಾಗಿದೆ. ಈ ಮಾರ್ಗದಲ್ಲಿ ವೇಗವಾಗಿ ಚಲಿಸುವ ರೈಲಿಗೆ ಹೋಲಿಸಿದರೆ, ವಂದೇ ಭಾರತ್ ರೈಲಿನಿಂದ ಎರಡು ಗಂಟೆ ಸಮಯ ಉಳಿತಾಯವಾಗಲಿದೆ'' ಎಂದು ಹೇಳಿದರು. ಪ್ರಧಾನಿ ಮೋದಿ ಅವರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಗವರ್ನರ್ ಆನಂದಿಬೆನ್ ಪಟೇಲ್ ಕೂಡಾ ಇದ್ದರು.
ಗೋರಖ್‌ಪುರ- ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಪರ್ಕಿಸುವ ನಗರಗಳಿವು:ಗೋರಖ್‌ಪುರ- ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಧಾನಿ ಚಾಲನೆ ನೀಡಿದರು. ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಬಾಬಾ ಗೋರಖ್‌ನಾಥ್ ನಗರ, ಭಗವಾನ್ ರಾಮನ ನಗರ, ಅಯೋಧ್ಯೆ ಮತ್ತು ಲಕ್ನೋ ನವಾಬ್‌ಗಳ ನಗರಕ್ಕೆ ಸಂಪರ್ಕಿಸುತ್ತದೆ. ಅಲ್ಲದೇ, 15ನೇ ಶತಮಾನದ ಅತೀಂದ್ರಿಯ ಕವಿ 'ಕಬೀರ್' ಅವರ ಪಟ್ಟಣವಾದ ಕುಶಿನಗರ, ಸಿದ್ಧಾರ್ಥ ನಗರ, ಸಂತ ಕಬೀರ್ ನಗರ ಮುಂತಾದ ಪ್ರವಾಸಿ ಸ್ಥಳಗಳು ಸುಧಾರಿತ ಸಂಪರ್ಕದಿಂದ ಈ ರೈಲಿನ ಪ್ರಯೋಜನ ಪಡೆಯುತ್ತವೆ.
ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮಿ ಹೈಸ್ಪೀಡ್ ರೈಲು ಆಗಿದ್ದು, ಇದು ಬಾಬಾ ಗೋರಖನಾಥರ ನಗರ ಎಂದು ಕರೆಯಲ್ಪಡುವ ಗೋರಖ್‌ಪುರ ನಗರಗಳ ನಡುವೆ ಸಂಪರ್ಕ ಕಲ್ಪಿಸಲಿದೆ. ರಾಜ್ಯದ ಮೊದಲ ಚಿಕಣಿ ಆವೃತ್ತಿಯ ಸೆಮಿ ಹೈಸ್ಪೀಡ್ ರೈಲಿನಲ್ಲಿ ಏಳು ಕೋಚ್‌ಗಳು ಹವಾನಿಯಂತ್ರಣ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಸೇರಿದಂತೆ ಎಂಟು ಕೋಚ್‌ಗಳನ್ನು ಹೊಂದಿರುತ್ತದೆ. ಜೋಧ್‌ಪುರ- ಸಾಬರಮತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರಾಜಪುತಾನ ಮತ್ತು ಅಹಮದಾಬಾದ್, ನಗರಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ. ಈ ರೈಲು ಮಾರ್ಗದಲ್ಲಿ ಪಾಲಿ, ಅಬು ರೋಡ್, ಪಾಲನ್‌ಪುರ್ ಮತ್ತು ಮೆಹ್ಸಾನಾ ನಗರಗಳನ್ನು ಸಂಪರ್ಕಿಸುತ್ತದೆ. ಇದು ಐತಿಹಾಸಿಕ ನಗರಗಳಾದ ಜೋಧ್‌ಪುರ ಮತ್ತು ಅಹಮದಾಬಾದ್‌ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರಯೋಜನವಾಗಲಿದೆ.
ಮೇಕ್ ಇನ್ ಇಂಡಿಯಾ:ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು 2019ರ ಫೆಬ್ರವರಿ 15ರಂದು ಪ್ರಧಾನ ಮಂತ್ರಿಯವರು ನವದೆಹಲಿ ಮತ್ತು ವಾರಣಾಸಿ ನಡುವೆ ಚಾಲನೆ ನೀಡಿದ್ದರು. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ನಲ್ಲಿ ತಯಾರಿಸಲಾದ ರೈಲು ಸೆಟ್ 'ಮೇಕ್-ಇನ್-ಇಂಡಿಯಾ' ಉಪಕ್ರಮವನ್ನು ಸಂಕೇತಿಸುತ್ತದೆ. ಭಾರತದ ಎಂಜಿನಿಯರಿಂಗ್ ಪರಾಕ್ರಮವನ್ನು ಪ್ರದರ್ಶಿಸುತ್ತದೆ.
ಸ್ಥಳೀಯ ಸೆಮಿ ಹೈಸ್ಪೀಡ್ ರೈಲು ಸೆಟ್‌ಗಳನ್ನು ತಯಾರಿಸುವ ಯೋಜನೆಯು 2017ರ ಮಧ್ಯದಲ್ಲಿ ಪ್ರಾರಂಭವಾಗಿತ್ತು. 18 ತಿಂಗಳೊಳಗೆ, ಐಸಿಎಫ್ ಚೆನ್ನೈ ರೈಲು-18 ಅನ್ನು ಪೂರ್ಣಗೊಳಿಸಿತು. ಭಾರತದ ಮೊದಲ ಸೆಮಿ-ಹೈ-ಸ್ಪೀಡ್ ರೈಲಿಗೆ ಅದರ ಮೇಡ್-ಇನ್-ಇಂಡಿಯಾ ಸ್ಥಿತಿಯನ್ನು ಒತ್ತಿಹೇಳಲು ಜನವರಿ 2019ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಯಿತು. ಕೋಟಾ - ಸವಾಯಿ ಮಾಧೋಪುರ್ ವಿಭಾಗದಲ್ಲಿ ರೈಲು ಗರಿಷ್ಠ ಗಂಟೆಗೆ 180 ಕಿಮೀ ವೇಗದಲ್ಲಿ ಸಂಚರಿಸಿ ದೇಶದಲ್ಲಿ ಸಾಧನೆ ಮೆರೆದಿತ್ತು.
ಇದನ್ನೂ ಓದಿ:Uniform Civil Code: ಏಕರೂಪ ನಾಗರಿಕ ಸಂಹಿತೆ ವಿಷಯದಲ್ಲಿ ಕಾಂಗ್ರೆಸ್ ಮೌನವೇಕೆ?- ಕೇರಳ ಸಿಎಂ