ಭೋಪಾಲ್ (ಮಧ್ಯಪ್ರದೇಶ): ''ನನ್ನ ಇಮೇಜ್ ಕೆಡಿಸಲು ಕೆಲವರು ನರಕಯಾತನೆ ಪಡುತ್ತಿದ್ದಾರೆ, ಜೊತೆಗೆ ಸುಪಾರಿಯನ್ನೂ ಕೊಟ್ಟಿದ್ದಾರೆ'' ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದರು. ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ನಂತರ, ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. "ಹಿಂದೆ, ಸರ್ಕಾರಗಳು ವೋಟ್ ಬ್ಯಾಂಕ್ನ ಓಲೈಕೆಯಲ್ಲಿ ನಿರತವಾಗಿದ್ದವು. ಆದರೆ, ನಾವು ಜನರನ್ನು ತೃಪ್ತಿಪಡಿಸುವಲ್ಲಿ ನಿರತರಾಗಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು.
"ಅವರು (ಹಿಂದಿನ ಸರ್ಕಾರಗಳು) ಒಂದು ಕುಟುಂಬವನ್ನು ದೇಶದ ಮೊದಲ ಕುಟುಂಬವೆಂದು ಪರಿಗಣಿಸಿದರು. ಜೊತೆಗೆ ಬಡ ಮತ್ತು ಮಧ್ಯಮ ವರ್ಗವನ್ನೂ ಕಡೆಗಣಿಸಿದರು. ರೈಲ್ವೆ ಇದಕ್ಕೆ ಜೀವಂತ ಉದಾಹರಣೆಯಾಗಿದೆ". ''ಕೆಲವರು ತಮ್ಮ ಇಮೇಜ್ ಹಾಳು ಮಾಡಲು ನರಕಯಾತನೆ ಅನುಭವಿಸುತ್ತಿದ್ದಾರೆ. ದೇಶದೊಳಗೆ ಮತ್ತು ಹೊರಗಿನ ಜನರೊಂದಿಗೆ ಶಾಮೀಲಾಗಿದ್ದಾರೆ. ಅದಕ್ಕೆ ‘ಸುಪಾರಿ’ ಕೊಟ್ಟಿದ್ದಾರೆ'' ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದರು.
ನೂತನ 11ನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ:ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೋಪಾಲ್ ಮತ್ತು ನವದೆಹಲಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ರಾಣಿ ಕಮಲಾಪತಿ ರೈಲು ನಿಲ್ದಾಣ, ಭೋಪಾಲ್ ಮತ್ತು ನವದೆಹಲಿ ರೈಲು ನಿಲ್ದಾಣದ ನಡುವೆ ಪರಿಚಯಿಸಲಾಗುತ್ತಿರುವ ಹೊಸ ರೈಲು ದೇಶದ 11ನೇ ವಂದೇ ಭಾರತ್ ರೈಲು ಆಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ರೈಲು ಸೆಟ್ ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದೆ. ಈ ರೈಲು ಪ್ರಯಾಣಿಕರಿಗೆ ವೇಗವಾದ, ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಹಾಗೂ ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.