ನವದೆಹಲಿ:ಬಜೆಟ್ನಲ್ಲಿ ಘೋಷಿಸಿದಂತೆ ರಸಗೊಬ್ಬರ, ಕೀಟನಾಶಕ ಸಿಂಪಡಣೆ ಮತ್ತು ಮಾರುಕಟ್ಟೆಗೆ ಉತ್ಪನ್ನಗಳ ಸಾಗಣೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಕಿಸಾನ್ ಡ್ರೋನ್‌ಗಳ ಬಳಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು.
ಮನೇಸರ್ನಲ್ಲಿ ನಡೆದ ವರ್ಚುಯಲ್ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ವಿವಿಧ ಕ್ಷೇತ್ರಗಳಲ್ಲಿ ಡ್ರೋನ್‌ಗಳ ಬಳಕೆಯ ಬಗ್ಗೆ ವಿವರಿಸಿ, ಬೀಟಿಂಗ್ ರಿಟ್ರೀಟ್ ವೇಳೆ (ಗಣರಾಜ್ಯೋತ್ಸವ ದಿನದಂದು) ಪ್ರದರ್ಶಿಸಲಾದ 1,000 ಡ್ರೋನ್‌ಗಳ ಉದಾಹರಣೆಗಳನ್ನು ಉಲ್ಲೇಖಿಸಿದರು.
ಸ್ವಾಮಿತ್ವ ಯೋಜನೆಯಡಿ ಭೂ ದಾಖಲೆಗಳ ಸಮೀಕ್ಷೆ ಮತ್ತು ಕಷ್ಟಕರವಾದ ಪ್ರದೇಶಗಳಿಗೆ ಔಷಧ, ಲಸಿಕೆ ಪೂರೈಸಲು ಡ್ರೋನ್ ಸಹಾಯಕವಾಗುತ್ತದೆ. ಹೆಚ್ಚಿನ ಸಾಮರ್ಥ್ಯದ ಕಿಸಾನ್ ಡ್ರೋನ್‌ಗಳು ರೈತರಿಗೆ ಲಭ್ಯವಾಗುವ ಮೂಲಕ ತಾಜಾ ತರಕಾರಿ, ಹಣ್ಣು ಮತ್ತು ಹೂವುಗಳನ್ನು ನೇರವಾಗಿ ಮಾರುಕಟ್ಟೆಗೆ ಕಳುಹಿಸಲು ಸಹಾಯ ಮಾಡುತ್ತವೆ. ಮೀನುಗಾರರು ನದಿ ಅಥವಾ ಸಮುದ್ರದಿಂದ ತಾಜಾ ಮೀನುಗಳನ್ನು ನೇರವಾಗಿ ಮಾರಾಟಕ್ಕೆ ಕಳುಹಿಸಬಹುದು ಎಂದು ಮೋದಿ ಹೇಳಿದರು.