ಕರ್ನಾಟಕ

karnataka

ETV Bharat / bharat

47ನೇ 'ರೈಸಿಂಗ್ ದಿನ': ಭಾರತೀಯ ಕೋಸ್ಟ್ ಗಾರ್ಡ್‌ಗೆ ಪ್ರಧಾನಿ ಮೋದಿ ಶುಭಾಶಯ - ಪ್ರಧಾನಿ ಮೋದಿ ಶುಭಾಶಯ

'ರೈಸಿಂಗ್ ದಿನ' - ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಪ್ರಧಾನಮಂತ್ರಿ ಶುಭಾಶಯ- ಕೋಸ್ಟ್ ಗಾರ್ಡ್ ವೃತ್ತಿಪರತೆ ಮತ್ತು ನಮ್ಮ ಕರಾವಳಿ ಸುರಕ್ಷತೆಗೆ ಹೆಸರುವಾಸಿ ಎಂದು ಬಣ್ಣನೆ

PM Modi extends wishes to Indian Coast Guard on Raising Day
'ರೈಸಿಂಗ್ ದಿನ': ಭಾರತೀಯ ಕೋಸ್ಟ್ ಗಾರ್ಡ್‌ಗೆ ಪ್ರಧಾನಿ ಮೋದಿ ಶುಭಾಶಯ

By

Published : Feb 1, 2023, 10:57 AM IST

ನವದೆಹಲಿ:ಭಾರತೀಯ ಕೋಸ್ಟ್ ಗಾರ್ಡ್ (ICG) ಇಂದು (ಬುಧವಾರ) ತನ್ನ 47ನೇ ರೈಸಿಂಗ್ ದಿನವನ್ನು ಆಚರಿಸುತ್ತಿದೆ. ಈ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಕೋಸ್ಟ್ ಗಾರ್ಡ್‌ಗೆ 'ರೈಸಿಂಗ್ ದಿನ'ದಂದು ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪಿಎಂ ಮೋದಿ "ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ರೈಸಿಂಗ್ ದಿನದ ಶುಭಾಶಯಗಳು. ಭಾರತೀಯ ಕೋಸ್ಟ್ ಗಾರ್ಡ್ ವೃತ್ತಿಪರತೆ ಮತ್ತು ನಮ್ಮ ಕರಾವಳಿಯನ್ನು ಸುರಕ್ಷಿತವಾಗಿಡುವ ಪ್ರಯತ್ನಗಳಿಗೆ ಹೆಸರುವಾಸಿಯಾಗಿದೆ. ಅವರ ಭವಿಷ್ಯದ ಪ್ರಯತ್ನಗಳಿಗಾಗಿ ನಾನು ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ" ಎಂದಿದ್ದಾರೆ.

ಈ ಮಧ್ಯೆ ಕೇರಳ ರಾಜ್ಯಪಾಲರು ಆರಿಫ್ ಮೊಹಮ್ಮದ್ ಖಾನ್ ಅವರು ಮಂಗಳವಾರ ಭಾರತೀಯ ಕೋಸ್ಟ್ ಗಾರ್ಡ್‌ನ ರೈಸಿಂಗ್ ದಿನಾಚರಣೆಗಾಗಿ ಕೋಸ್ಟ್ ಗಾರ್ಡ್ ಜಿಲ್ಲಾ ಕೇಂದ್ರಕ್ಕೆ (ಕೇರಳ ಮತ್ತು ಮಾಹೆ) ಆಗಮಿಸಿದರು. ಕೋಸ್ಟ್ ಗಾರ್ಡ್ ಡಿಸ್ಟ್ ಡಿಐಜಿ ಎನ್. ರವಿ ಅವರು ರಾಜ್ಯಪಾಲರನ್ನು ಬರಮಾಡಿಕೊಂಡರು.

ಸಂಸತ್ತಿಗೆ ಆಗಮಿಸಿದ ಪ್ರಮುಖ ನಾಯಕರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023 ಅನ್ನು ಸಂಸತ್ತಿನಲ್ಲಿ ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಸಚಿವ ಸಂಪುಟ ಸಭೆ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಜಿ ಕಿಶನ್ ರೆಡ್ಡಿ ಸಂಸತ್ತಿಗೆ ಆಗಮಿಸಿದರು. ಸದ್ಯದಲ್ಲೇ ಇಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.

ಸಂಸತ್ತಿಗೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಸಂಸತ್ತಿಗೆ ಆಗಮಿಸಿದ ಹಣಕಾಸು ಸಚಿವೆ: ಕೇಂದ್ರ ಬಜೆಟ್ ಮಂಡನೆಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಾಂಪ್ರದಾಯಿಕ ಕೆಂಪು ಸೀರೆಯಲ್ಲಿ ಸಂಸತ್ತಿಗೆ ಆಗಮಿಸಿದರು. ಕೈಯಲ್ಲಿ ಕೆಂಪು ಡಿಜಿಟಲ್ ಟ್ಯಾಬ್​ನೊಂದಿಗೆ ಕಾಣಿಸಿಕೊಂಡರು. ಇಂದು ಮಂಡಿಸುವ ಬಜೆಟ್ ಸೀತಾರಾಮನ್ ಅವರ 5ನೇ ಬಜೆಟ್ ಆಗಿದೆ.

ಕಾಗದ ರಹಿತ ಬಜೆಟ್​:ಕೇಂದ್ರ ಬಜೆಟ್ 2023-24 ಅನ್ನು ಹಿಂದಿನ 2 ವರ್ಷಗಳಂತೆಯೇ ಕಾಗದರಹಿತ ಸ್ವರೂಪದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಸಾಂಪ್ರದಾಯಿಕ ಬಹಿ ಖಾತಾ ಶೈಲಿಯ ಚೀಲದಲ್ಲಿ ಸುತ್ತುವ ಡಿಜಿಟಲ್ ಟ್ಯಾಬ್ಲೆಟ್ ಅನ್ನು ಅವರು ಹಿಡಿದಿದ್ದರು. ಚಿನ್ನದ ಬಣ್ಣದ ರಾಷ್ಟ್ರೀಯ ಲಾಂಛನ ಹೊಂದಿರುವ ಕೆಂಪು ಕವರ್‌ನೊಳಗೆ ಇರಿಸಲಾದ ಟ್ಯಾಬ್ಲೆಟ್‌ನಲ್ಲಿ ನಿರ್ಮಲಾ ಅವರು ಸಂಸತ್ತಿಗೆ ಬಂದರು.

ರಾಷ್ಟ್ರಪತಿ ಭೇಟಿ:​ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಸಚಿವರಾದ ಡಾ.ಭಾಗವತ್ ಕಿಶನ್‌ರಾವ್ ಕರಾಡ್, ಪಂಕಜ್ ಚೌಧರಿ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಬಜೆಟ್ ಮಂಡನೆಗೂ ಮೊದಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಕೇಂದ್ರ ಬಜೆಟ್ 2023:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಪೂರ್ಣಾವಧಿ ಕೊನೆಯ ಬಜೆಟ್​ ಮಂಡನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಅವರು ಬಜೆಟ್​ ಪ್ರತಿಯನ್ನು ಓದಲಿದ್ದಾರೆ. 2024ರ ಏಪ್ರಿಲ್- ಮೇ ತಿಂಗಳಲ್ಲಿ ಮುಂದಿನ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಬಜೆಟ್‌ ಹೆಚ್ಚಿನ ಮಹತ್ವ ಪಡೆದುಕೊಂಡಿದೆ

ಇದನ್ನೂ ಓದಿ:ನಿರ್ಮಲಾ ಸೀತಾರಾಮನ್​ ಬಜೆಟ್​ನಲ್ಲಿ ಏನೇನು ಕೊಡುಗೆ ನೀಡಬಹುದು?

ABOUT THE AUTHOR

...view details