ಕರ್ನಾಟಕ

karnataka

ETV Bharat / bharat

ಶ್ರೀರಾಮನ ಬದುಕು ಪ್ರತಿ ಯುಗದ ಮಾನವೀಯತೆಗೆ ಸ್ಫೂರ್ತಿ: ಪ್ರಧಾನಿ ಮೋದಿ

ರಾಮನ ಜೀವನವು ಪ್ರತಿ ಯುಗದಲ್ಲೂ ಸ್ಫೂರ್ತಿಯಾಗಲಿದೆ. ನನ್ನ ಎಲ್ಲಾ ದೇಶವಾಸಿಗಳಿಗೆ ಶ್ರೀ ರಾಮ ನವಮಿಯ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

modi
ಮೋದಿ

By

Published : Mar 30, 2023, 10:09 AM IST

ನವದೆಹಲಿ: ವಿಷ್ಣುವಿನ 7ನೇ ಅವತಾರವೆಂದು ಪರಿಗಣಿಸಲ್ಪಟ್ಟಿರುವ ಭಗವಾನ್ ಶ್ರೀರಾಮನ ಜನ್ಮದಿನವನ್ನು ಇಂದು ಹಿಂದೂಗಳು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ವಿಶ್ವದೆಲ್ಲೆಡೆ ಆಚರಿಸುತ್ತಿದ್ದಾರೆ. ರಾಮ ನವಮಿ ಹಬ್ಬದ ಅಂಗವಾಗಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಭಗವಾನ್ ರಾಮನ ಜೀವನವು ಪ್ರತಿ ಯುಗದಲ್ಲೂ ಮಾನವೀಯತೆಗೆ ಸ್ಫೂರ್ತಿಯಾಗಿ ಉಳಿಯುತ್ತದೆ ಎಂದು ಅವರು ಬಣ್ಣಿಸಿದ್ದಾರೆ.

ಈ ಕುರಿತು ಟ್ವಿಟ್​ ಮಾಡಿರುವ ಮೋದಿ, "ಎಲ್ಲಾ ದೇಶವಾಸಿಗಳಿಗೆ ಶ್ರೀ ರಾಮ ನವಮಿಯ ಶುಭಾಶಯಗಳು. ತ್ಯಾಗ, ತಪಸ್ಸು, ಸಂಯಮ ಮತ್ತು ಸಂಕಲ್ಪವನ್ನು ಆಧರಿಸಿದ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮಚಂದ್ರನ ಜೀವನವು ಪ್ರತಿ ಯುಗದಲ್ಲೂ ಮಾನವೀಯತೆಗೆ ಸ್ಫೂರ್ತಿಯಾಗಲಿದೆ" ಎಂದಿದ್ದಾರೆ.

ಇದನ್ನೂ ಓದಿ :ರಾಮ ಹಿಂದೂಗಳಿಗೆ ಮಾತ್ರ ದೇವರಲ್ಲ; ಮುಸ್ಲಿಂ, ಕ್ರಿಶ್ಚಿಯನ್ನರಿಗೂ​ ದೇವರು: ಫಾರೂಕ್​ ಅಬ್ದುಲ್ಲಾ

ಇನ್ನು ಒಡಿಶಾದ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಕೂಡ ಪುರಿ ಕಡಲತೀರದಲ್ಲಿ ವಿಶೇಷವಾದ ಮರಳು ಕಲಾಕೃತಿ ರಚಿಸುವ ಮೂಲಕ ರಾಮ ನವಮಿ ಶುಭಾಶಯ ತಿಳಿಸಿದ್ದಾರೆ. ಮರಳಿನಲ್ಲಿ ಶ್ರೀರಾಮ ಮತ್ತು ರಾಮ ಮಂದಿರದ ಮರಳು ಕಲೆಯನ್ನು ಅವರು ಆಕರ್ಷಕವಾಗಿ ರಚಿಸಿದ್ದಾರೆ.

ಇದನ್ನೂ ಓದಿ :ಅಯೋಧ್ಯೆ ಶ್ರೀರಾಮ ಮಂದಿರ ದ್ವಾರ ಸ್ತಂಭಕ್ಕೆ ಪೂಜೆ

ಕಾಂಗ್ರೆಸ್​ ನಾಯಕರ ರಾಹುಲ್​ ಗಾಂಧಿ ಕೂಡ ಟ್ವೀಟ್​ ಮಾಡಿ ದೇಶದ ಸಮಸ್ತ ಜನತೆಗೆ ರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. "ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ನಾನು ಭಾವಿಸುತ್ತೇನೆ" ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ :ಶ್ರೀರಾಮನ ಕುರಿತು ವಿವಾದಿತ ಹೇಳಿಕೆ: ಭಗವಾನ್ ವಿರುದ್ಧ ಪೊಲೀಸರಿಗೆ ದೂರು

ಶುಭ ಕೋರಿದ ಬೊಮ್ಮಾಯಿ: "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ. ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ. ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ. ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ" ಎಂಬ ಹಾಡಿನ ಸಾಲುಗಳನ್ನು ಬರೆಯುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಸಮಸ್ತ ಜನತೆಗೆ ಶ್ರೀ ಮರ್ಯಾದಾ ಪುರುಷೋತ್ತಮ, ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ. ಜೊತೆಗೆ, ಪ್ರಭು ರಾಮಚಂದ್ರ ಸರ್ವರ ಬಾಳಿನಲ್ಲಿ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ರಾಮ ನವಮಿ ಬಗ್ಗೆ..: ರಾಮ ನವಮಿಯು ಹಿಂದೂ ಹಬ್ಬವಾಗಿದ್ದು, ವಿಷ್ಣುವಿನ ಅವತಾರವಾದ ಭಗವಾನ್ ರಾಮನ ಜನ್ಮವನ್ನು ಗೌರವಿಸುವ ಸಲುವಾಗಿ ಆಚರಿಸಲಾಗುತ್ತದೆ. ಈ ದಿನವು ಒಂಬತ್ತು ದಿನಗಳ ಚೈತ್ರ-ನವರಾತ್ರಿ ಆಚರಣೆಗಳ ಅಂತ್ಯವನ್ನು ಸೂಚಿಸುತ್ತದೆ. ಇದು ಕೆಡುಕಿನ ಮೇಲೆ ವಿಜಯದ ಸಂಕೇತ ಮತ್ತು ಸುಳ್ಳಿನ ಮೇಲೆ ಸತ್ಯದ ಆಚರಣೆಯಾಗಿದೆ. ಸದಾಚಾರದ ಮಾರ್ಗವನ್ನು ಅನುಸರಿಸಲು ಹಾಗೂ ಸಹಾನುಭೂತಿ ಮತ್ತು ಸಾಮರಸ್ಯದ ಜೀವನವನ್ನು ನಡೆಸಲು ನಮಗೆ ಸೂಚಿಸುತ್ತದೆ. ದೇಶಾದ್ಯಂತ ರಾಮಮಂದಿರಗಳಲ್ಲಿ ಭಗವಾನ್ ರಾಮನನ್ನು ಭಕ್ತರು ಪೂಜಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಇದನ್ನೂ ಓದಿ :ರಾಮ, ಸೀತೆ ವಿಗ್ರಹ ಕೆತ್ತನೆಗೆ ನೇಪಾಳದಿಂದ ವಿಶಿಷ್ಟ ಶಾಲಿಗ್ರಾಮ್​ ಕಲ್ಲು ರವಾನೆ

ABOUT THE AUTHOR

...view details