ರಾಯಪುರ (ಛತ್ತೀಸಗಢ): ಛತ್ತೀಸಗಢದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಇಂದು ಪ್ರಧಾನಿ ನರೇಂದ್ರ ಚಾಲನೆ ನೀಡಿದರು. ಜೊತೆಗೆ ಇಲ್ಲಿ 7600 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಎಂ ಭೂಪೇಶ್ ಬಘೇಲ್ ಮತ್ತು ಉಪ ಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್ ಉಪಸ್ಥಿತರಿದ್ದರು.
ಛತ್ತೀಸ್‌ಗಢಕ್ಕೆ ಪ್ರಧಾನಿ ಮೋದಿ ನೀಡಿದ ಉಡುಗೊರೆ: ನಾಲ್ಕು ವರ್ಷಗಳ ನಂತರ ಛತ್ತೀಸ್‌ಗಢ ತಲುಪಿದ ಪ್ರಧಾನಿ ಮೋದಿ, ರಾಜ್ಯದಲ್ಲಿ 7600 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿ 33 ಕಿಲೋಮೀಟರ್ ಉದ್ದದ ರಾಯಪುರ-ಕೊಡೆಬೋಡ್ ವಿಭಾಗ ನಾಲ್ಕು ಲೇನ್ ರಸ್ತೆ ಸೇರಿವೆ. NH-30 ನಲ್ಲಿ ನಿರ್ಮಿಸಲಾದ ರಸ್ತೆಯ ವೆಚ್ಚ 988 ಕೋಟಿ ರೂ. ಆಗಿದೆ. NH-30 ರ ಬಿಲಾಸ್‌ಪುರ-ಅಂಬಿಕಾಪುರ ಮಾರ್ಗದಲ್ಲಿ 53 ಕಿಲೋಮೀಟರ್ ಉದ್ದದ ಬಿಲಾಸ್‌ಪುರ-ಪಾತ್ರಪಾಲಿ 4-ಲೇನ್ ರಸ್ತೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ರಸ್ತೆಯು ಯುಪಿಯೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಟ್ರಾಫಿಕ್ ಕೂಡ ಮೊದಲಿಗಿಂತ ಉತ್ತಮವಾಗಿರುತ್ತದೆ. ಈ ರಸ್ತೆಯ ನಿರ್ಮಾಣ ವೆಚ್ಚ 1261 ಕೋಟಿ ರೂ. ಆಗಿದೆ.
6-ಲೇನ್ ಗ್ರೀನ್‌ಫೀಲ್ಡ್ ರಾಯ್‌ಪುರ-ವಿಶಾಖಪಟ್ಟಣಂ ಕಾರಿಡಾರ್‌ನಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದರು. ಇವುಗಳಲ್ಲಿ NH-30 ರ 43 ಕಿಮೀ 6-ಲೇನ್ ಝಂಕಿ-ಸರ್ಗಿ ವಿಭಾಗ, NH-30 ನಲ್ಲಿ 57 ಕಿಮೀ 6-ಲೇನ್ ಸರ್ಗಿ-ಬಸನ್ವಾಹಿ ಮತ್ತು NH-30 ನಲ್ಲಿ 25 ಕಿಮೀ 6-ಲೇನ್ ಬಸನ್ವಾಹಿ-ಮರಂಗಪುರಿ ರಸ್ತೆ ನಿರ್ಮಾಣ ಸೇರಿವೆ. ಯೋಜನೆಯು 2.8 ಕಿಲೋಮೀಟರ್ ಉದ್ದದ 6 ಲೇನ್ ಸುರಂಗವನ್ನು ಸಹ ಒಳಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಅತ್ಯಂತ ಗಮನಾರ್ಹವಾದುದು ಉದಾಂತಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ 2.8 ಕಿಮೀ ಉದ್ದದ 6-ಲೇನ್ ಸುರಂಗ. ಇದರಲ್ಲಿ ವನ್ಯಜೀವಿಗಳ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ 27 ಅನಿಮಲ್ ಪಾಸ್ ಹಾಗೂ 17 ಕೋತಿ ಕ್ಯಾನೋಪಿಗಳನ್ನು ಮಾಡಲಾಗಿದೆ.
ಛತ್ತೀಸ್‌ಗಢದ ಜನತೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ: ಯೋಜನೆಗಳಿಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಛತ್ತೀಸ್‌ಗಢದ ಅಭಿವೃದ್ಧಿ ಪಯಣದಲ್ಲಿ ಇಂದು ಅತ್ಯಂತ ಮಹತ್ವದ ದಿನವಾಗಿದೆ ಎಂದು ಪ್ರಧಾನಿ ಹೇಳಿದರು. ಇದೊಂದು ದೊಡ್ಡ ದಿನ, ಇಂದು ಛತ್ತೀಸ್‌ಗಢಕ್ಕೆ 7 ಸಾವಿರ ಕೋಟಿಗೂ ಅಧಿಕ ಮೊತ್ತದ ಯೋಜನೆಗಳ ಉಡುಗೊರೆ ಸಿಕ್ಕಿದೆ. ಈ ಉಡುಗೊರೆ ಮೂಲಸೌಕರ್ಯ ಸಂಪರ್ಕವು ಛತ್ತೀಸ್‌ಗಢದ ಜನರಿಗೆ ಜೀವನವನ್ನು ಸುಲಭಗೊಳಿಸುತ್ತದೆ. ಇಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇಲ್ಲಿನ ರೈತರು, ಉದ್ಯಮಿಗಳು ಮತ್ತು ಪ್ರವಾಸೋದ್ಯಮಕ್ಕೂ ಈ ಯೋಜನೆಯಿಂದ ಲಾಭವಾಗಲಿದೆ. ಬುಡಕಟ್ಟು ಪ್ರದೇಶಗಳಲ್ಲಿ ಅನುಕೂಲ ಮತ್ತು ಅಭಿವೃದ್ಧಿಯ ಹೊಸ ಪಯಣ ಆರಂಭವಾಗಲಿದೆ ಎಂದು ಅವರು ಹೇಳಿದರು.
ಎಲ್ಲಿ ಮೂಲಸೌಕರ್ಯ ಉತ್ತಮವಾಗಿರುತ್ತದೆಯೋ ಅಲ್ಲಿನ ಅಭಿವೃದ್ಧಿಯೂ ವೇಗದಲ್ಲಿ ಆಗುತ್ತದೆ. ಮೂಲಸೌಕರ್ಯ ಬಂದರೆ ಜನರ ಜೀವನ ಸುಲಭವಾಗುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇಂದು ಭಾರತದಲ್ಲಿ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿದೆ. ಕಳೆದ 9 ವರ್ಷಗಳಲ್ಲಿ ಪ್ರಧಾನ ಮಂತ್ರಿ ಸಡಕ್ ಯೋಜನೆ ಮೂಲಕ ಛತ್ತೀಸ್‌ಗಢದ ಬುಡಕಟ್ಟು ಗ್ರಾಮಗಳಿಗೆ ರಸ್ತೆಗಳು ತಲುಪಿವೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಆರಂಭಿಸಲಾಗಿದೆ. 3000 ಕಿಲೋಮೀಟರ್ ಯೋಜನೆಗಳು ಪೂರ್ಣಗೊಂಡಿವೆ. ಭಾರತ ಸರ್ಕಾರವು ಛತ್ತೀಸ್‌ಗಢದಲ್ಲಿ ರೈಲು, ರಸ್ತೆ ಅಥವಾ ಟೆಲಿಕಾಂ ಎಲ್ಲ ರೀತಿಯ ಸಂಪರ್ಕಕ್ಕಾಗಿ ಅಭೂತಪೂರ್ವ ಕೆಲಸವನ್ನು ಮಾಡಿದೆ ಎಂದು ಮೋದಿ ತಿಳಿಸಿದರು.
ಇದನ್ನೂ ಓದಿ :ರೂಪಾಯಿಯ ಅಂತಾರಾಷ್ಟ್ರೀಕರಣ; ಡಾಲರ್ಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ ದೇಸಿ ಕರೆನ್ಸಿ