ಮಧುರೈ(ತಮಿಳುನಾಡು) :ಸೌರಾಷ್ಟ್ರದ ಜನರನ್ನು ಮಧುರೈ ಸ್ವೀಕರಿಸುವ ರೀತಿ 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಎಂದು ಪ್ರಧಾನಿ ಮೋದಿ ಶುಕ್ರವಾರ ಹೇಳಿದ್ದಾರೆ.
ತಮಿಳುನಾಡಿನ ಮಧುರೈನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರದೇಶದ ಜನರು ದೃಢ ಮನಸ್ಸು ಮತ್ತು ದೊಡ್ಡ ಹೃದಯ ಹೊಂದಿದ್ದಾರೆ. ವರ್ಷಗಳ ಹಿಂದೆ ನನ್ನ ತವರು ರಾಜ್ಯ ಗುಜರಾತ್‌ನ ಸೌರಾಷ್ಟ್ರದ ಜನ ಇಲ್ಲಿಗೆ ಬಂದರು. ಮಧುರೈ ಅವರನ್ನು ಒಪ್ಪಿಕೊಂಡ ರೀತಿ ಏಕ್ ಭಾರತ್, ಶ್ರೇಷ್ಠ ಭಾರತ್ಗೆ ಒಂದು ಉತ್ತಮ ಉದಾಹರಣೆ ಎಂದು ಮೋದಿ ತಿಳಿಸಿದ್ದಾರೆ.
ತಮಿಳುನಾಡಿನ ಜಲ್ ಜೀವನ್ ಮಿಷನ್ ಅನುಷ್ಠಾನದ ಕುರಿತು ಮಾತನಾಡುತ್ತಾ, ಈ ಭೂಮಿ ಭಗವಾನ್ ಸುಂದರೇಶ್ವರರಿಂದ ಆಶೀರ್ವದಿಸಲ್ಪಟ್ಟಿದೆ. ಭಾರತದಲ್ಲಿ ಟ್ಯಾಪ್ ವಾಟರ್ ಸಂಪರ್ಕಕ್ಕಾಗಿ ಜಲ ಜೀವನ್ ಮಿಷನ್ ಇದೆ. ಇಲ್ಲಿ ಪ್ರಾರಂಭವಾದಾಗಿನಿಂದ 60 ಲಕ್ಷಕ್ಕೂ ಹೆಚ್ಚು ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.