ಕರ್ನಾಟಕ

karnataka

ETV Bharat / bharat

'ಆರ್‌ಆರ್‌ಆರ್‌', 'ದ ಎಲಿಫೆಂಟ್‌ ವಿಸ್ಪರರ್ಸ್‌' ಆಸ್ಕರ್ ಸಾಧನೆ: ಪ್ರಧಾನಿ ಮೋದಿ ಅಭಿನಂದನೆ - ದ ಎಲಿಫೆಂಟ್‌ ವಿಸ್ಪರರ್ಸ್‌

ಆಸ್ಕರ್‌ ಪ್ರಶಸ್ತಿ ಪಡೆದುಕೊಂಡ ಆರ್​ಆರ್​ಆರ್​ ಮತ್ತು ದ ಎಲಿಫೆಂಟ್‌ ವಿಸ್ಪರರ್ಸ್‌ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

modi
ಮೋದಿ

By

Published : Mar 13, 2023, 11:41 AM IST

Updated : Mar 13, 2023, 11:51 AM IST

ಪ್ರತಿಷ್ಟಿತ ಅಕಾಡೆಮಿ ಅವಾರ್ಡ್ಸ್ 2023 ಸಮಾರಂಭದಲ್ಲಿ ಭಾರತಕ್ಕೆ ಈ ಬಾರಿ ಎರಡು ಪ್ರಶಸ್ತಿಗಳು ಲಭಿಸಿವೆ. ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(RRR) ಚಿತ್ರದ ನಾಟು ನಾಟು ಹಾಡಿಗೆ 'ಅತ್ಯುತ್ತಮ ಮೂಲ ಗೀತೆ' ವಿಭಾಗದಲ್ಲಿ ಮತ್ತು ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಗುನೀತ್ ಮೊಂಗಾ ನಿರ್ಮಾಣದ 'ದ ಎಲಿಫೆಂಟ್‌ ವಿಸ್ಪರರ್ಸ್‌'​ಗೆ ಆಸ್ಕರ್‌ ಅವಾರ್ಡ್​ ಒಲಿದು ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

ಮೊದಲು ನಾಟು ನಾಟು ಸಾಂಗ್​ ಕುರಿತು ಟ್ವೀಟ್​ ಮಾಡಿರುವ ಪ್ರಧಾನಿ, "RRR ಸಿನಿಮಾದ 'ನಾಟು ನಾಟು' ಗೀತೆಯ ಜನಪ್ರಿಯತೆ ಜಾಗತಿಕವಾಗಿ ವ್ಯಾಪಿಸಿದೆ. ಮುಂದಿನ ವರ್ಷಗಳಲ್ಲಿ ಎಲ್ಲರ ನೆನಪಿನಲ್ಲಿ ಉಳಿಯುವ ಹಾಡು ಇದಾಗಿದೆ. ಪ್ರತಿಷ್ಟಿತ ಆಸ್ಕರ್​ ಗೌರವ ಪಡೆದ ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು. ಇದು ಭಾರತವೇ ಹೆಮ್ಮೆಪಡುವ ಸಾಧನೆ" ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ :95ನೇ ಆಸ್ಕರ್ ಪ್ರಶಸ್ತಿ: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ..

ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಹಾಗೂ ಗುನೀತ್ ಮೊಂಗಾ ನಿರ್ಮಾಣದ 'ದ ಎಲಿಫೆಂಟ್‌ ವಿಸ್ಪರರ್ಸ್‌' ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಕುರಿತು ಸಹ ಟ್ವೀಟ್​ ಮಾಡಿರುವ ಮೋದಿ, ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. "ಈ ಕಿರು ಸಾಕ್ಷ್ಯಚಿತ್ರದ ಮೂಲಕ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಬಗೆಗಿನ ಪ್ರಾಮುಖ್ಯತೆಯನ್ನು ಅದ್ಭುತವಾಗಿ ತೋರಿಸಲಾಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ :RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್‌ ಗರಿ!

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮಾಡಿ, ಭಾರತದ ವಿಜೇತ ಚಿತ್ರತಂಡಗಳಿಗೆ ಅಭಿನಂದನೆ ತಿಳಿಸಿದ್ದಾರೆ. "ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ 'ದ ಎಲಿಫೆಂಟ್‌ ವಿಸ್ಪರರ್ಸ್‌' ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಗುನೀತ್ ಮೊಂಗಾ ಮತ್ತು ಕಾರ್ತಿಕಿ ಗೊನ್ಸಾಲ್ವೆಸ್ ಅವರು ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ನಿಸರ್ಗ ಸೌಂದರ್ಯವನ್ನು ಹೃದಯಕ್ಕೆ ಮುಟ್ಟುವಂತೆ ತೋರಿಸಿಕೊಟ್ಟಿದ್ದಾರೆ. ಈ ಸಾಕ್ಷ್ಯಚಿತ್ರದ ಮೂಲಕ ಭಾರತವೇ ಹೆಮ್ಮೆಪಡುವಂತೆ ಮಾಡಿದ್ದಾರೆ" ಎಂದಿದ್ದಾರೆ. ಜೊತೆಗೆ, ಆರ್​ಆರ್​ಆರ್​ ಚಿತ್ರತಂಡದ ಕುರಿತು ಟ್ವೀಟ್​ ಮಾಡಿ, ಭಾರತದ ಹಾಡು ನಿಜವಾಗಿಯೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್‌ ಪ್ರಶಸ್ತಿ ಗೆದ್ದ ನಾಟು ನಾಟು ಹಾಡಿನ 'RRR' ಚಿತ್ರತಂಡವನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ :'ದ ಎಲಿಫೆಂಟ್‌ ವಿಸ್ಪರರ್ಸ್‌' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್‌ ಪ್ರಶಸ್ತಿ!

ಆಸ್ಕರ್​ ಅವಾರ್ಡ್​ 2023 ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಎರಡೂ ಚಿತ್ರತಂಡಕ್ಕೆ ಚಲನಚಿತ್ರರಂಗ, ನಟ-ನಟಿಯರು ಸೇರಿದಂತೆ ದೇಶದ ಜನತೆ ಹರ್ಷ ವ್ಯಕ್ತಪಡಿಸಿ ಶುಭಾಶಯಗಳ ಸುರಿಮಳೆಗೈದಿದ್ದಾರೆ.

ಇದನ್ನೂ ಓದಿ :ಆಸ್ಕರ್‌ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಮೋಹಕ ನೋಟ

Last Updated : Mar 13, 2023, 11:51 AM IST

ABOUT THE AUTHOR

...view details