ಕರ್ನಾಟಕ

karnataka

ETV Bharat / bharat

ಭುವನ ಸುಂದರಿ ಪಟ್ಟ ತಂದುಕೊಟ್ಟ ಬೆಡಗಿಗೆ ನಮೋ ಶುಭ ಹಾರೈಕೆ

21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ ತಂದುಕೊಟ್ಟಿರುವ 21 ವರ್ಷದ ಹರ್ನಾಜ್ ಕೌರ್ ಸಂಧು ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

By

Published : Dec 13, 2021, 11:51 PM IST

PM modi congratulates miss universe
PM modi congratulates miss universe

ನವದೆಹಲಿ:70ನೇ ಮಿಸ್‌ ಯೂನಿವರ್ಸ್‌ ಆಗಿ ಹೊರಹೊಮ್ಮಿರುವ ಚಂಡೀಗಢ ಮೂಲದ ಭಾರತದ ರೂಪದರ್ಶಿ ಹರ್ನಾಜ್‌ ಕೌರ್‌ ಸಂಧು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ಟ್ವೀಟ್​​ ಮಾಡಿದ್ದಾರೆ. 21 ವರ್ಷಗಳ ನಂತರ ಭಾರತದಿಂದ ಆಯ್ಕೆಯಾದ ಮೊದಲ ಭುವನ ಸುಂದರಿ ಎಂಬ ಹೆಗ್ಗಳಿಕೆಗೆ 21 ವರ್ಷದ ಹರ್ನಾಜ್​​​ ಪಾತ್ರರಾಗಿದ್ದು, ನಮೋ ಶುಭ ಹಾರೈಕೆ ಮಾಡಿದ್ದಾರೆ.

'ಭುವನ ಸುಂದರಿ ಕಿರೀಟವನ್ನ ಅಲಂಕಾರ ಮಾಡಿದ್ದಕ್ಕಾಗಿ ಹರ್ನಾಜ್​​ ಸಂಧು ಅವರಿಗೆ ಅಭಿನಂದನೆಗಳು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭಾಶಯಗಳು' ಎಂದು ತಿಳಿಸಿದ್ದಾರೆ.

ಈ ಹಿಂದೆ ಭಾರತದಿಂದ 1994ರಲ್ಲಿ ಸುಶ್ಮಿತಾ ಸೇನ್‌ ಹಾಗೂ 2000ರಲ್ಲಿ ಲಾರಾ ದತ್ತಾ ಭೂಪತಿ ಈ ಸಾಧನೆ ಮಾಡಿದ್ದರು. ಭುವನ ಸುಂದರಿಯಾಗಿ ಆಯ್ಕೆಯಾಗಿರುವ ಹರ್ನಾಜ್​​ ಸಂಧು ಅವರಿಗೆ ಬಾಲಿವುಡ್ ನಟಿ ಲಾರಾ ದತ್ತಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಈಗಾಗಲೇ ವಿಶ್​ ಮಾಡಿದ್ದಾರೆ.

ಇದನ್ನೂ ಓದಿರಿ:ಬಹಳ ದಿನಗಳ ಬಳಿಕ ಭರವಸೆಗಳನ್ನು ಹೊತ್ತು ತಂದ ಮಿಸ್​ ಯುನಿವರ್ಸ್ 'ಸಂಧು'

ABOUT THE AUTHOR

...view details