ನವದೆಹಲಿ:ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಖರ್ಗೆ ಅವರ ಮುಂದಿನ ಅಧಿಕಾರಾವಧಿ ಫಲಪ್ರದವಾಗಿರಲಿ ಎಂದು ಶುಭ ಹಾರೈಸಿದ್ದಾರೆ. ಇಂದು ಪ್ರಕಟವಾದ ಕೈ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣಾ ಫಲಿತಾಂಶದಲ್ಲಿ ಖರ್ಗೆ 7,897 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಅಕ್ಟೋಬರ್ 26ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಖರ್ಗೆಗೆ ಪ್ರಧಾನಿ ಅಭಿನಂದನೆ: ಅಧಿಕಾರಾವಧಿ ಫಲಪ್ರದವಾಗಿರಲಿ ಎಂದ ಮೋದಿ - ಖರ್ಗೆಗೆ ಪ್ರಧಾನಿ ಅಭಿನಂದನೆ
ಕಾಂಗ್ರೆಸ್ ಅಧ್ಯಕ್ಷರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಾಶಯಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಖರ್ಗೆಗೆ ಪ್ರಧಾನಿ ಅಭಿನಂದನೆ: ಅಧಿಕಾರಾವಧಿ ಫಲಪ್ರದವಾಗಿರಲಿ ಎಂದ ಮೋದಿ