ಕರ್ನಾಟಕ

karnataka

ETV Bharat / bharat

ಕೊರೊನಾ ವೇಳೆ ನಮ್ಮ ವಿಜ್ಞಾನಿಗಳು ಶಕ್ತಿ ಮೀರಿ ಯಶಸ್ವಿ: ಇಸ್ರೋ ಸಾಧನೆಗೆ ನಮೋ ಮೆಚ್ಚುಗೆ! - ಭೂವೀಕ್ಷಣೆ ಉಪಗ್ರಹ ಸೇರಿ 10 ಸ್ಯಾಟಲೈಟ್

ಬಾಹ್ಯಾಕಾಶ ಜಗತ್ತಿನಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಾಣ ಮಾಡುತ್ತಿರುವ ಇಸ್ರೋ ಇಂದು ಮತ್ತೊಂದು ರೆಕಾರ್ಡ್​ ಮಾಡಿದೆ. ಭಾರತೀಯ ಬಾಹಾಕ್ಯಾಶ ಸಂಸ್ಥೆ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

pm modi congratulate
pm modi congratulate

By

Published : Nov 7, 2020, 5:48 PM IST

ನವದೆಹಲಿ: ಭಾರತೀಯ ಬಾಹಾಕ್ಯಾಶ ಸಂಸ್ಥೆ(ಇಸ್ರೋ) ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ 10 ಉಪಗ್ರಹಗಳ ಉಡಾವಣೆ ಮಾಡಿದ್ದು, ವಿಜ್ಞಾನಿಗಳ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ದೀಪಾವಳಿಗಿಂತಲೂ ಮುಂಚಿತವಾಗಿ ಸ್ಯಾಟಲೈಟ್​ಗಳ ಯಶಸ್ವಿ ಉಡಾವಣೆ: ಕೆ.ಸಿವನ್​ ಸಂತೋಷದ ಮಾತು!

ಪಿಎಸ್​​ಎಲ್​ವಿ-ಸಿ 49 ರಾಕೆಟ್​ ಯಶಸ್ವಿಯಾಗಿ ಉಡಾವಣೆ ಮಾಡಿರುವ ಇಸ್ರೋ ಹಾಗೂ ಈ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದಿರುವ ನಮೋ, ಕೋವಿಡ್​-19 ಕಠಿಣ ಸಂದರ್ಭದಲ್ಲಿ ನಮ್ಮ ವಿಜ್ಞಾನಿಗಳು ಅನೇಕ ಸವಾಲು ಮೀರಿ ಯಶಸ್ಸು ಸಾಧಿಸಿದ್ದಾರೆ. ಜತೆಗೆ ನಿರ್ದಿಷ್ಟ ಸಮಯದಲ್ಲಿ ತಮ್ಮ ಗಡವು ಮುಟ್ಟಿದ್ದಾರೆ ಎಂದಿದ್ದಾರೆ. ಇದರ ಜತೆಗೆ ಮತ್ತೊಂದು ಟ್ವೀಟ್ ಮಾಡಿರುವ ನರೇಂದ್ರ ಮೋದಿ, 9 ಉಪಗ್ರಹಗಳು ಅದರಲ್ಲಿ ಅಮೆರಿಕ ಹಾಗೂ ಲುಕ್ಸಂಬರ್ಗ್​ನ ತಲಾ 4 ಉಪಗ್ರಹಗಳು ಸೇರಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಭೂವೀಕ್ಷಣೆ ಉಪಗ್ರಹ ಸೇರಿ 10 ಸ್ಯಾಟಲೈಟ್​ಗಳ ಉಡಾವಣೆ ಯಶಸ್ವಿಯಾಗಿ ಶ್ರೀಹರಿಕೋಟಾದ ಸತೀಶ್​ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆಗೊಂಡಿದ್ದು, ಎಲ್ಲ ಉಪಗ್ರಹಗಳು ಯಶಸ್ವಿಯಾಗಿ ತಮ್ಮ ತಮ್ಮ ಕಕ್ಷೆ ಸೇರಿಕೊಂಡಿವೆ.

ABOUT THE AUTHOR

...view details