ರಾಂಬನ್, ಜಮ್ಮು ಕಾಶ್ಮೀರ :ಕಂದಕದೊಳಗೆ ವಾಹನ ಉರುಳಿ ಐದು ಮಂದಿ ಮೃತಪಟ್ಟಿರುವ ಘಟನೆ ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನೂ ಐದು ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಂಬನ್ನ ರಾಜ್ಯ ಹೆದ್ದಾರಿ 44ರಲ್ಲಿ ಪ್ಯಾಸೆಂಜರ್ ವಾಹನವೊಂದು ಮತ್ತೊಂದು ಪ್ಯಾಸೆಂಜರ್ ವಾಹನಕ್ಕೆ ಡಿಕ್ಕಿಯಾಗಿ, ಆಳ ಕಂದರಕ್ಕೆ ಬಿದ್ದು ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.