ಕರ್ನಾಟಕ

karnataka

ETV Bharat / bharat

ಅಸ್ಸೋಂ ರೈಫಲ್ಸ್ ಬೆಂಗಾವಲು ಪಡೆಯ ಮೇಲೆ ದಾಳಿ : ಖಂಡನೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ - ಅಸ್ಸಾಂ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ವಿಪ್ಲವ್ ತ್ರಿಪಾಠಿ ಹತ್ಯೆ

ಮಣಿಪುರದಲ್ಲಿ ಅಸ್ಸೋಂ ರೈಫಲ್ಸ್​ನ ಬೆಂಗಾವಲು ಪಡೆ ಮೇಲೆ ನಡೆದ ಉಗ್ರ ದಾಳಿ ಬಗ್ಗೆ ಪ್ರಧಾನಿ ಮೋದಿ ಖಂಡನೆ ವ್ಯಕ್ತ ಪಡಿಸಿದ್ದು, ಹುತಾತ್ಮರ ಯೋಧರು ಹಾಗೂ ಅವರ ಕುಟಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ..

PM Modi condemns terrorist attack on Assam Rifles convoy in Manipur
ನರೇಂದ್ರ ಮೋದಿ

By

Published : Nov 13, 2021, 8:06 PM IST

ನವದೆಹಲಿ: ಮಣಿಪುರದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಅಸ್ಸೋಂ ರೈಫಲ್ಸ್​ನ ಕರ್ನಲ್,(Assam Rifles Colonel) ಅವರ ಪತ್ನಿ ಮತ್ತು ಪುತ್ರ ಹಾಗೂ ನಾಲ್ವರು ಯೋಧರು ಹುತಾತ್ಮರಾದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ( Prime minister Modi) ಖಂಡಿಸಿದ್ದಾರೆ.

“ಮಣಿಪುರದಲ್ಲಿ ಅಸ್ಸೋಂ ರೈಫಲ್ಸ್ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಇಂದು ಹುತಾತ್ಮರಾದ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ.

ಅವರ ತ್ಯಾಗವನ್ನು ಎಂದಿಗೂ ಮರೆಯಲಾಗದು. ಈ ದುಃಖದ ಘಳಿಗೆಯಲ್ಲಿ ನನ್ನ ಆಲೋಚನೆಗಳು ದುಃಖತಪ್ತ ಕುಟುಂಬಗಳೊಂದಿಗೆ ಇವೆ" ಎಂದು ಪ್ರಧಾನಿ ಟ್ವೀಟ್(Prime minister tweet) ಮಾಡಿದ್ದಾರೆ.

ಅವರು ಇಂದು ಮಣಿಪುರದ ಭಾರತ-ಮ್ಯಾನ್ಮಾರ್ ಗಡಿಯ( India-Myanmar border) ಬಳಿ ಭಯೋತ್ಪಾದಕರು(terrorists) ನಡೆಸಿದ ದಾಳಿಯಲ್ಲಿ 46 ಅಸ್ಸೋಂ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ (CO) ಕರ್ನಲ್ ವಿಪ್ಲವ್ ತ್ರಿಪಾಠಿ(Viplav Tripathi) ಅವರ ಪತ್ನಿ ಮತ್ತು ಅವರ 6 ವರ್ಷದ ಮಗ ಮತ್ತು ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:Manipur ambush: ಅಸ್ಸೋಂ ರೈಫಲ್​ನ​ CO ಪತ್ನಿ, ಮಗ ಹಾಗೂ ಐವರು ಸಿಬ್ಬಂದಿ ಹುತಾತ್ಮ

ಭಾರತೀಯ ಸೇನೆಯ ಪ್ರಕಾರ ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಇತರ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಬೆಹಿಯಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್ ಸೆಹ್ಕೆನ್ ಗ್ರಾಮದ ಬಳಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಅಸ್ಸೋಂ ರೈಫಲ್ಸ್‌ನ ಬೆಂಗಾವಲು ಪಡೆಯ ಮೇಲೆ ಬಂಡುಕೋರರು ದಾಳಿ ನಡೆಸಿ, ಕರ್ನಲ್ ಮತ್ತು ಅವರ ಕುಟುಂಬ ಸೇರಿದಂತೆ ಐವರು ಅಸ್ಸೋಂ ರೈಫಲ್ಸ್ (Assam Rifles)ಸಿಬ್ಬಂದಿಯ ಸಾಮೂಹಿಕ ಹತ್ಯೆಗೆ ಕಾರಣರಾದರು ಎಂದು ಅಸ್ಸೋಂ ರೈಫಲ್ಸ್‌ನ ಡೈರೆಕ್ಟರ್ ಜನರಲ್ ಅಧಿಕೃತ ಹೇಳಿಕೆ ತಿಳಿಸಿದೆ. ತ್ರಿಪಾಠಿ ಸೇರಿ ಉಳಿದ ಎಲ್ಲಾ ಹುತಾತ್ಮರ ತ್ಯಾಗ ಸ್ಮರಿಸುವಂತದ್ದು ಎಂದು ಸೇನೆ ಹೇಳಿದೆ.

ABOUT THE AUTHOR

...view details