ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಟ್ವಿಟರ್​, ಇನ್​ಸ್ಟಾ ಡಿಪಿ "ತಿರಂಗಾ"ಮಯ..ಚಿತ್ರ ಬದಲಿಸಲು ಜನರಿಗೂ ಮನವಿ - ಈಟಿವಿ ಭಾರತ ಕನ್ನಡ ನ್ಯೂಸ್​

ಇಂದನಿಂದ ಆಗಸ್ಟ್​ 15 ರವರೆಗೆ ಹರ್​ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತದೆ. ಇದರಡಿ ಪ್ರಧಾನಿ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಡಿಪಿಯಲ್ಲಿ ತಿರಂಗಾ ಅಳವಡಿಸಿದ್ದಾರೆ.

pm-modi-changes-his-profile-picture
ಡಿಪಿ ಬದಲಿಸಿದ ಪ್ರಧಾನಿ ಮೋದಿ

By

Published : Aug 2, 2022, 10:57 AM IST

ನವದೆಹಲಿ:ದೇಶದಲ್ಲಿ ಇಂದಿನಿಂದ ಹರ್​ ಘರ್​ ತಿರಂಗಾ ಅಭಿಯಾನ ಆರಂಭಿಸಲಾಗಿದೆ. ಪ್ರತಿ ಮನೆಯ ಮೇಲೆ ಆಗಸ್ಟ್​ 2 ರಿಂದ 15 ರವರೆಗೆ ತ್ರಿವರ್ಣ ಧ್ವಜ ಹಾರಿಸುವಂತೆ ಕೇಂದ್ರ ಸರ್ಕಾರ ಕೋರಿತ್ತು. ಇದಲ್ಲದೇ, ಮನ್​ ಕಿ ಬಾತ್​ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳ ಡಿಪಿಯಲ್ಲಿ ತಿರಂಗಾ ಹಾಕುವಂತೆ ಹೇಳಿದ್ದರು. ಸ್ವತಃ ಮೋದಿ ಅವರೇ ತಮ್ಮ ಟ್ವಿಟರ್​, ಇನ್​ಸ್ಟಾಗ್ರಾಮ್​ ಖಾತೆಯ ಡಿಪಿ ಬದಲಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, "ಇಂದು ವಿಶೇಷವಾದ ದಿನ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದೇವೆ. ಎಲ್ಲರೂ ಈ ಸಂಭ್ರಮ ಆಚರಿಸೋಣ. ತ್ರಿವರ್ಣ ಧ್ವಜವನ್ನು ಸಾಮೂಹಿಕವಾಗಿ ಹಾರಿಸುವ ಮೂಲಕ ಸಂಭ್ರಮ ಇಮ್ಮಡಿಗೊಳಿಸೋಣ. ಸಾಮಾಜಿಕ ಜಾಲತಾಣಗಳ ಡಿಪಿಯನ್ನು ನಾನು ಬದಲಿಸಿದ್ದೇನೆ. ನೀವು ಕೂಡ ಬದಲಿಸಿ ಎಂದು ಹೇಳಿದ್ದಾರೆ.

ಇಂದು ಪಿಂಗಾಲಿ ವೆಂಕಯ್ಯ ಅವರ ಜನ್ಮದಿನವಾಗಿದ್ದು, ಅವರಿಗೆ ನಮನ ಸಲ್ಲಿಸಿ ಮತ್ತೊಂದು ಟ್ವೀಟ್‌ ಮಾಡಿರುವ ಪ್ರಧಾನಿ, "ಗೌರವಾನ್ವಿತ ಪಿಂಗಾಲಿ ವೆಂಕಯ್ಯ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ತ್ರಿವರ್ಣ ಧ್ವಜವನ್ನು ನೀಡಿದ ಅವರ ಸಾಧನೆಯನ್ನು ದೇಶ ಸ್ಮರಿಸುತ್ತದೆ. ಚಿರಋಣಿಯಾಗಿದೆ. ತ್ರಿವರ್ಣ ಧ್ವಜದಿಂದ ಶಕ್ತಿ ಮತ್ತು ಸ್ಫೂರ್ತಿ ಪಡೆದುಕೊಂಡು, ರಾಷ್ಟ್ರ ಪ್ರಗತಿಗಾಗಿ ಕೆಲಸ ಮಾಡುತ್ತಲೇ ಇರೋಣ" ಎಂದು ತಿಳಿಸಿದ್ದಾರೆ.

ಓದಿ:ಮುಂದುವರಿದ ಯುದ್ಧ: ಉಕ್ರೇನ್​ ತಲುಪಿದ ಜರ್ಮನಿ ಮಲ್ಟಿಪಲ್ ರಾಕೆಟ್ ಲಾಂಚರ್‌ ಮಾರ್ಸ್ II

ABOUT THE AUTHOR

...view details