ಗಾಂಧಿನಗರ, ಗುಜರಾತ್ :ತಮ್ಮ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಶ್ರೀ ಸೋಮನಾಥ ಟ್ರಸ್ಟ್‌ನ ಸಭೆಯ ಅಧ್ಯಕ್ಷತೆ ವಹಿಸಿ ಅಲ್ಲಿನ ಮೂಲಸೌಕರ್ಯ ಉನ್ನತೀಕರಣ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತಹ ಮೂಲಸೌಕರ್ಯ ಉನ್ನತೀಕರಣ ಕ್ರಮಗಳ ಕುರಿತು ನಾವು ಚರ್ಚಿಸಿದ್ದೇವೆ. ಸೋಮನಾಥವನ್ನು ಆದರ್ಶ ತೀರ್ಥ ಕ್ಷೇತ್ರವನ್ನಾಗಿ ಮಾಡಲು ಟ್ರಸ್ಟ್ ಅನೇಕ ಪ್ರಯತ್ನಗಳನ್ನು ಮಾಡಿದೆ. ಈಗ ಸೋಮನಾಥ ಕ್ಷೇತ್ರ ಎಲ್ಲೆಡೆಯಿಂದ ಜನರನ್ನು ಸೆಳೆಯುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.