ಕರ್ನಾಟಕ

karnataka

ETV Bharat / bharat

ಸೂರತ್​ನಲ್ಲಿ ಪಿಎಂ ಮೋದಿ ಪ್ರಚಾರ: ಡೈಮಂಡ್​ ವ್ಯಾಪಾರಿಗಳು, ಪಾಟಿದಾರ್ ಮುಖಂಡರ ಭೇಟಿ - ಸೂರತ್‌ನ 40 ಕ್ಕೂ ಹೆಚ್ಚು ವಜ್ರ ಕೈಗಾರಿಕೋದ್ಯಮಿ

ಸೂರತ್‌ನ 12 ವಿಧಾನಸಭಾ ಸ್ಥಾನಗಳ ಪೈಕಿ ನಾಲ್ಕರಲ್ಲಿ ಪಾಟಿದಾರ್ ಸಮುದಾಯದ ಪ್ರಾಬಲ್ಯವಿದೆ. ವರಾಛಾ ಕ್ಷೇತ್ರವನ್ನು ವಿಶೇಷವಾಗಿ ಮಿನಿ ಸೌರಾಷ್ಟ್ರ ಎಂದು ಪರಿಗಣಿಸಲಾಗುತ್ತದೆ. ಕಳೆದ ಎಂಟು ತಿಂಗಳಿಂದ ಈ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಪ್ರಚಾರ ನಡೆಸುತ್ತಿರುವ ರೀತಿಯನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ತಾವೇ ಇಲ್ಲಿ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸೂರತ್​ನಲ್ಲಿ ಪಿಎಂ ಮೋದಿ ಪ್ರಚಾರ: ಡೈಮಂಡ್​ ವ್ಯಾಪಾರಿಗಳು, ಸಮುದಾಯ ಮುಖಂಡರೊಂದಿಗೆ ಭೇಟಿ
PM Modi Campaign in Surat

By

Published : Nov 28, 2022, 3:23 PM IST

ಸೂರತ್(ಗುಜರಾತ್​): ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿಗಾಗಿ ಹಲವಾರು ಪ್ರಯತ್ನ ಮಾಡುತ್ತಿದ್ದಾರೆ. ಸೂರತ್‌ನಲ್ಲಿ ಮೆಗಾ ರೋಡ್‌ಶೋ ನಡೆಸಿದ ಪ್ರಧಾನಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಾರ್ವಜನಿಕ ಸಭೆಯ ನಂತರ ಅವರು ಸೂರತ್‌ನ 40ಕ್ಕೂ ಹೆಚ್ಚು ವಜ್ರ ಕೈಗಾರಿಕೋದ್ಯಮಿಗಳು ಮತ್ತು ಸಮುದಾಯದ ಮುಖಂಡರೊಂದಿಗೆ 15 ನಿಮಿಷ ಸಭೆ ನಡೆಸಿದರು. ಪ್ರಧಾನಿ ಮೋದಿ ರಾತ್ರಿ ಸೂರತ್‌ನಲ್ಲಿ ತಂಗಿದ್ದರು. ಇದೇ ವೇಳೆ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸಿ ಆರ್ ಪಟೇಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ಹರ್ಷ ಶಾಂಘ್ವಿ ಅವರೊಂದಿಗೆ ರಾತ್ರಿ ಮತ್ತು ಬೆಳಗ್ಗೆ ಸಭೆ ನಡೆಸಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ.

ಸೂರತ್‌ನ 12 ವಿಧಾನಸಭಾ ಸ್ಥಾನಗಳ ಪೈಕಿ ನಾಲ್ಕರಲ್ಲಿ ಪಾಟಿದಾರ್ ಸಮುದಾಯದ ಪ್ರಾಬಲ್ಯವಿದೆ. ವರಾಛಾ ಕ್ಷೇತ್ರವನ್ನು ವಿಶೇಷವಾಗಿ ಮಿನಿ ಸೌರಾಷ್ಟ್ರ ಎಂದು ಪರಿಗಣಿಸಲಾಗುತ್ತದೆ. ಕಳೆದ ಎಂಟು ತಿಂಗಳಿಂದ ಈ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಪ್ರಚಾರ ನಡೆಸುತ್ತಿರುವ ರೀತಿಯನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ತಾವೇ ಇಲ್ಲಿ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 31 ಕಿಲೋಮೀಟರ್ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ವರಾಛಾ ಪ್ರದೇಶದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಸಾರ್ವಜನಿಕ ಸಭೆ ನಡೆಸಿದರು.

ಸೂರತ್ ಸುತ್ತಮುತ್ತ ಸುಮಾರು 15 ಲಕ್ಷ ಕಾರ್ಮಿಕರು ವಜ್ರಗಳನ್ನು ಕತ್ತರಿಸುವ ಮತ್ತು ಪಾಲಿಶ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಪ್ರಧಾನಿಯವರ ಈ ಸಭೆಗಳು ಮಹತ್ವ ಪಡೆದುಕೊಂಡಿವೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಭಯೋತ್ಪಾದನೆಯೇ ವೋಟ್​ ಬ್ಯಾಂಕ್: ಪ್ರಧಾನಿ ಮೋದಿ ಆರೋಪ

ABOUT THE AUTHOR

...view details