ಇಂದೋರ್(ಮಧ್ಯಪ್ರದೇಶ): ಕೇಂದ್ರದಲ್ಲಿ ಅಧಿಕಾರ ಹಿಡಿದು 8 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರ ಸಹೋದರನ ಮಗನ ವಿವೇಕ್ ವಿಜಯವರ್ಗಿಯ ಅವರ ವಿವಾಹ ಆರತಕ್ಷತೆಯಲ್ಲಿ ಪಾಲ್ಗೊಳ್ಳಲು ಗುರುವಾರ ರಾತ್ರಿ ಪ್ರಧಾನಿ ಮೋದಿ ಇಂದೋರ್ಗೆ ಆಗಮಿಸಿದ್ದರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಇದೀಗ ಹಲವು ಅರ್ಥಗಳನ್ನು ಪಡೆಯುತ್ತಿದೆ.
ವಿಜಯವರ್ಗಿಯ ಅವರು ಹಲವು ವರ್ಷಗಳಿಂದ ಬಿಜೆಪಿ ಜೊತೆ ಸಂಬಂಧ ಹೊಂದಿದ್ದು, ಪಕ್ಷದ ಸಕ್ರಿಯ ನಾಯಕರಾಗಿದ್ದಾರೆ. ಅದಲ್ಲದೇ ಪ್ರಧಾನಿ ಮೋದಿಯವರ ಮೆಚ್ಚಿನ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಹಾಗಾಗಿ ಕೈಲಾಶ್ ವಿಜಯವರ್ಗಿಯ ತಮ್ಮನ ಮಗನ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಳ್ಳಲು ಇಂದೋರ್ಗೆ ಆಗಮಿಸಿ, ನವದಂಪತಿಯನ್ನು ಆಶೀರ್ವದಿಸಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಇದೇ ವೇಳೆ, ಹಲವು ಕೇಂದ್ರ ಸಚಿವರು, ಸಂಸದರು ಹಾಗೂ ದೇಶದ ಹೇಸರಾಂತ ಕೈಗಾರಿಕೋದ್ಯಮಿಗಳೂ ಸಮಾರಂಭದಲ್ಲಿ ಭಾಗವಹಿಸಿದ್ದರು.
ವಿಜಯವರ್ಗಿಯ ವರ್ಚಸ್ಸು ಹೆಚ್ಚುತ್ತಿದೆಯೇ: ಮೋದಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಕೈಲಾಶ್ ವಿಜಯವರ್ಗಿಯ ಅವರ ಹೆಸರುಗಳು ಮುನ್ನೆಲೆಗೆ ಬಂದಿದ್ದು, ಇದೀಗ ರಾಜಕೀಯ ವಲಯದಲ್ಲಿ ವಿಜಯವರ್ಗಿಯ ಅವರ ರಾಜಕೀಯ ಸ್ಥಾನಮಾನಕ್ಕೆ ಇದು ಲಿಂಕ್ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಿದ್ದರೂ ಉಸ್ತುವಾರಿಯಾಗಿ ವಿಜಯವರ್ಗಿಯ ಅವರು ಅಲ್ಲಿ ಸಂಘಟನೆಯನ್ನು ಬಲಪಡಿಸಿದ್ದು, ಇದರಿಂದ ಅವರ ರಾಜಕೀಯ ಹಿರಿಮೆ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.