ಕರ್ನಾಟಕ

karnataka

ETV Bharat / bharat

ಶಿವಗಿರಿ ತೀರ್ಥಯಾತ್ರೆಯ 90ನೇ ವಾರ್ಷಿಕೋತ್ಸವದ ಜಂಟಿ ಆಚರಣೆ: ಪ್ರಧಾನಿ ಮೋದಿ ಭಾಗಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಶಿವಗಿರಿ ತೀರ್ಥೋದ್ಭವದ 90ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವ ಸೇರಿ ಜಂಟಿ ಆಚರಣೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.

Narendra Modi attended anniversary of Sivagiri Pilgrimage  Sivagiri Pilgrimage  90th anniversary of Sivagiri Pilgrimage  ಶಿವಗಿರಿ ತೀರ್ಥಯಾತ್ರೆಯ 90ನೇ ವಾರ್ಷಿಕೋತ್ಸವದ ಜಂಟಿ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ  ಶಿವಗಿರಿ ತೀರ್ಥಸ್ಥಳ  ಶಿವಗಿರಿ ತೀರ್ಥಯಾತ್ರೆಯ ವಾರ್ಷಿಕೋತ್ಸವ  ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವ
ಶಿವಗಿರಿ ತೀರ್ಥಯಾತ್ರೆಯ 90ನೇ ವಾರ್ಷಿಕೋತ್ಸವದ ಜಂಟಿ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ

By

Published : Apr 26, 2022, 1:52 PM IST

ನವದೆಹಲಿ:ಶಿವಗಿರಿ ತೀರ್ಥಯಾತ್ರೆಯ 90ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವದ ವಾರ್ಷಿಕ ಜಂಟಿ ಆಚರಣೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭಾಗವಹಿಸಿದರು. ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಮತ್ತು ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಧಾನಿ ಅವರ ಅಧಿಕೃತ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಿತು. ಪ್ರಧಾನಿ ಕಾರ್ಯಾಲಯದ ಪ್ರಕಾರ ಒಂದು ವರ್ಷದ ಜಂಟಿ ಆಚರಣೆಗಳಿಗೆ ಮೀಸಲಾಗಿರುವ ಲೋಗೋವನ್ನು ಬಿಡುಗಡೆ ಮಾಡಲಿದ್ದಾರೆ. ಮಹಾನ್ ಸಮಾಜ ಸುಧಾರಕ ನಾರಾಯಣ ಗುರುಗಳ ಮಾರ್ಗದರ್ಶನದಲ್ಲಿ ಶಿವಗಿರಿ ತೀರ್ಥಯಾತ್ರೆ ಮತ್ತು ಬ್ರಹ್ಮ ವಿದ್ಯಾಲಯ ಸೇರಿ ಎರಡೂ ಒಟ್ಟಿಗೆ ಪ್ರಾರಂಭಿಸಿದ್ದರು. ಶಿವಗಿರಿ ಯಾತ್ರೆಯು ಪ್ರತಿ ವರ್ಷ ಡಿಸೆಂಬರ್ 30 ರಿಂದ ಜನವರಿ 1 ರವರೆಗೆ ಮೂರು ದಿನಗಳ ಕಾಲ ತಿರುವನಂತಪುರಂನ ಶಿವಗಿರಿಯಲ್ಲಿ ನಡೆಯುತ್ತದೆ.

ಓದಿ:ಇಂದು ರೈಸಿನಾ ಸಂವಾದ ಉದ್ಘಾಟಿಸುವ ಮೋದಿ.. ಸಮ್ಮೇಳನದಲ್ಲಿ 90 ರಾಷ್ಟ್ರಗಳು, ವಿವಿಧ ದೇಶದ ಮಾಜಿ ಪಿಎಂಗಳು ಭಾಗಿ..

ನಾರಾಯಣ ಗುರುಗಳ ಪ್ರಕಾರ, ತೀರ್ಥಯಾತ್ರೆಯ ಉದ್ದೇಶವು ಜನರಲ್ಲಿ ಸಮಗ್ರ ಜ್ಞಾನದ ಸೃಷ್ಟಿಯಾಗಬೇಕು. ಅವರ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಮೃದ್ಧಿಗೆ ತೀರ್ಥಯಾತ್ರೆ ಸಹಾಯ ಮಾಡುತ್ತದೆ. ಆದ್ದರಿಂದ ತೀರ್ಥಯಾತ್ರೆಯು ಶಿಕ್ಷಣ, ಸ್ವಚ್ಛತೆ, ಧರ್ಮನಿಷ್ಠೆ, ಕರಕುಶಲ, ವ್ಯಾಪಾರ ಮತ್ತು ವಾಣಿಜ್ಯ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಘಟಿತ ಪ್ರಯತ್ನ ಎಂಬ ಎಂಟು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದ್ದಾರೆ.

1933 ರಲ್ಲಿ ಬೆರಳೆಣಿಕೆಯಷ್ಟು ಭಕ್ತರೊಂದಿಗೆ ತೀರ್ಥಯಾತ್ರೆ ಪ್ರಾರಂಭಿಸಿದರು. ಆದರೆ, ಈಗ ದಕ್ಷಿಣ ಭಾರತದ ಪ್ರಮುಖ ಕಾರ್ಯಕ್ರಮದಲ್ಲಿ ಒಂದಾಗಿದೆ. ಪ್ರತಿ ವರ್ಷ ತೀರ್ಥಯಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಜಾತಿ, ಧರ್ಮ, ಭಾಷೆಯ ಭೇದವಿಲ್ಲದೆ ಶಿವಗಿರಿಗೆ ಭೇಟಿ ನೀಡುತ್ತಾರೆ.

ನಾರಾಯಣ ಗುರುಗಳು ಎಲ್ಲಾ ಧರ್ಮಗಳ ತತ್ವಗಳನ್ನು ಸಮಚಿತ್ತದಿಂದ ಮತ್ತು ಸಮಾನ ಗೌರವದಿಂದ ಬೋಧಿಸಲು ಸ್ಥಳವನ್ನು ಕಲ್ಪಿಸಿದ್ದರು. ಈ ದೃಷ್ಟಿಯನ್ನು ಸಾಕಾರಗೊಳಿಸಲು ಶಿವಗಿರಿಯ ಬ್ರಹ್ಮ ವಿದ್ಯಾಲಯವನ್ನು ಸ್ಥಾಪಿಸಿದರು. ಬ್ರಹ್ಮ ವಿದ್ಯಾಲಯವು ನಾರಾಯಣ ಗುರುಗಳ ಕೃತಿಗಳು ಮತ್ತು ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳ ಗ್ರಂಥಗಳನ್ನು ಒಳಗೊಂಡಂತೆ ಭಾರತೀಯ ತತ್ತ್ವಶಾಸ್ತ್ರದ 7 ವರ್ಷಗಳ ಕೋರ್ಸ್ ಅನ್ನು ನೀಡುತ್ತದೆ.


ABOUT THE AUTHOR

...view details