ಕರ್ನಾಟಕ

karnataka

ETV Bharat / bharat

NDAಗೆ ಹೊಸ ವ್ಯಾಖ್ಯಾನ ನೀಡಿದ ಪ್ರಧಾನಿ : ನಮ್ಮಲ್ಲಿ ದೊಡ್ಡ, ಚಿಕ್ಕ ಪಕ್ಷ ಎಂಬ ಭೇದವಿಲ್ಲ- ಮೋದಿ - ಎನ್​ಡಿಎ ಮೈತ್ರಿಕೂಟದ ಸಭೆ

ಎನ್​ಡಿಎ ಮೈತ್ರಿಕೂಟದ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಎನ್‌ಡಿಎಯಲ್ಲಿ ಯಾವುದೇ ಪಕ್ಷ ದೊಡ್ಡದು ಅಥವಾ ಚಿಕ್ಕದು ಇಲ್ಲ ಎಂದು ಹೇಳಿದ್ದಾರೆ.

PM Modi at NDA meeting: Modi gave a new definition to NDA
NDAಗೆ ಹೊಸ ವ್ಯಾಖ್ಯಾನ ನೀಡಿದ ಪ್ರಧಾನಿ : ನಮ್ಮಲ್ಲಿ ದೊಡ್ಡ, ಚಿಕ್ಕ ಪಕ್ಷ ಎಂಬ ಭೇದವಿಲ್ಲ- ಮೋದಿ

By

Published : Jul 18, 2023, 9:18 PM IST

Updated : Jul 18, 2023, 9:47 PM IST

ನವದೆಹಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಪ್ರಧಾನಿ ಮೋದಿ ಹೊಸ ವ್ಯಾಖ್ಯಾನ ನೀಡಿದ್ದಾರೆ. ಎನ್‌ಡಿಎಯಲ್ಲಿ 'ಎನ್' ಎಂದರೆ ನವ ಭಾರತ (N - New India), 'ಡಿ' ಎಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರ (D - Developed Nation), 'ಎ' ಎಂದರೆ ಜನರು ಮತ್ತು ಪ್ರದೇಶಗಳ ಆಕಾಂಕ್ಷೆಗಳು (A - Aspirations of people and regions) ಎಂದು ಮೋದಿ ವಿವರಿಸಿದ್ದಾರೆ.

ದೆಹಲಿಯಲ್ಲಿ ನಡೆದ ಇಂದು ನಡೆದ ಎನ್​ಡಿಎ ಮೈತ್ರಿಕೂಟದ ಮಹತ್ವದ ಸಭೆ ಬಳಿಕ ಮಾತನಾಡಿದ ಅವರು, ಎನ್‌ಡಿಎಯಲ್ಲಿ ಯಾವುದೇ ಪಕ್ಷ ದೊಡ್ಡದು ಅಥವಾ ಚಿಕ್ಕದು ಇಲ್ಲ. 2014 ಮತ್ತು 2019ರಲ್ಲಿ ಬಿಜೆಪಿ ಬಹುಮತ ಪಡೆದಿತ್ತು. ಆದರೆ, ಎನ್‌ಡಿಎ ಸರ್ಕಾರ ರಚಿಸಿತ್ತು. ಅಲ್ಲದೇ, ನಾವು ಎಂದಿಗೂ ವಿದೇಶಿ ಶಕ್ತಿಗಳ ಸಹಾಯವನ್ನು ಪಡೆದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ದೆಹಲಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಆರಂಭ... ನಮ್ಮದು ದೀರ್ಘಾವಧಿ ಮೈತ್ರಿ ಎಂದ ಪ್ರಧಾನಿ ಮೋದಿ

ಎನ್‌ಡಿಎ ಅಟಲ್ ಬಿಹಾರಿ ವಾಜಪೇಯಿಯವರ ಪರಂಪರೆಯಾಗಿದೆ. ಎಲ್​ಕೆ ಅಡ್ವಾಣಿ ಕೂಡ ಅದನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೇ, ಎನ್‌ಡಿಎ ರೂಪಿಸುವಲ್ಲಿ ಪ್ರಕಾಶ್ ಸಿಂಗ್ ಬಾದಲ್, ಬಾಳಾಸಾಹೇಬ್ ಠಾಕ್ರೆ, ಅಜಿತ್ ಸಿಂಗ್, ಶರದ್ ಯಾದವ್ ಮುಂತಾದ ನಾಯಕರು ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಎನ್‌ಡಿಎ ದೇಶದ ಜನರನ್ನು ಒಗ್ಗೂಡಿಸುತ್ತದೆ, ವಿರೋಧ ಪಕ್ಷಗಳು ಜನತೆಯನ್ನು ವಿಭಜಿಸುತ್ತವೆ. ಕಳೆದ ಒಂಬತ್ತು ವರ್ಷಗಳಲ್ಲಿ ಎನ್​ಡಿಎ ಬಡವರು ಮತ್ತು ವಂಚಿತರ ಜೀವನ ಸುಧಾರಣೆಗಾಗಿ ಕೆಲಸ ಮಾಡಿದೆ. ವಿರೋಧ ಪಕ್ಷದಲ್ಲಿದ್ದಾಗಲೂ ಎನ್‌ಡಿಎ ಯಾವಾಗಲೂ ಸಕಾರಾತ್ಮಕ ರಾಜಕೀಯವನ್ನು ಅನುಸರಿಸಿತ್ತು ಎಂದು ತಿಳಿಸಿದರು.

ಎನ್​ಡಿಎ ಬಲವಂತದ ಒಕ್ಕೂಟವಲ್ಲ. ಅದು ಕೊಡುಗೆಯನ್ನು ಸಂಕೇತಿಸುತ್ತದೆ... ಇಲ್ಲಿ ಪ್ರತಿಯೊಬ್ಬರೂ ಶ್ರೇಯಸ್ಸು ಪಡೆಯುತ್ತಾರೆ ಮತ್ತು ಎಲ್ಲರೂ ಕೊಡುಗೆ ನೀಡುತ್ತಾರೆ. ಮಹಾತ್ಮಾ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್, ರಾಮ್ ಮನೋಹರ್ ಲೋಹಿಯಾ ಅವರು ತೋರಿಸಿದ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಎನ್‌ಡಿಎ ನಡೆಯುತ್ತಿದೆ. ಎನ್‌ಡಿಎ ಸರ್ಕಾರವು ವಿರೋಧ ಪಕ್ಷದ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಹಾಗೂ ಮುಲಾಯಂ ಸಿಂಗ್ ಯಾದವ್, ಶರದ್ ಯಾದವ್‌ ಅವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿದೆ ಎಂದು ವಿವರಿಸಿದರು.

2014ರ ಹಿಂದಿನ ಸಮ್ಮಿಶ್ರ ಸರ್ಕಾರಗಳು ಹೇಗೋ ಉಳಿದುಕೊಂಡವು. ಆದರೆ ದೇಶವು ನೀತಿಯು ಪಾರ್ಶ್ವವಾಯುಕ್ಕೆ ತುತ್ತಾಗಿತ್ತು. ಪ್ರಧಾನ ಮಂತ್ರಿಗಿಂತ ಹೈಕಮಾಂಡ್ ಇತ್ತು ಎಂದು ವಾಗ್ದಾಳಿ ನಡೆಸಿದ ಮೋದಿ, ರಾಜಕೀಯ ಸ್ವಾರ್ಥಕ್ಕಾಗಿ ವಿರೋಧ ಪಕ್ಷಗಳು ಹತ್ತಿರ ಬರಬಹುದು. ಆದರೆ, ಎಂದಿಗೂ ಅವು ಒಂದಾಗಲು ಸಾಧ್ಯವಿಲ್ಲ ಎಂದು ಕುಟುಕಿದರು.

ಇದನ್ನೂ ಓದಿ:ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ INDIA ಎಂದು ನಾಮಕರಣ: ಸುದ್ದಿಗೋಷ್ಠಿಯಲ್ಲಿ ಖರ್ಗೆ ಘೋಷಣೆ

Last Updated : Jul 18, 2023, 9:47 PM IST

ABOUT THE AUTHOR

...view details