ನವದೆಹಲಿ:ಸರ್ಕಾರದ ಕೆಲಸಗಳ ಬಗ್ಗೆ ಸತ್ಯಗಳನ್ನು ಜನರ ಮುಂದಿಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಸಂಸದರಿಗೆ ಸೂಚಿಸಿದ್ದಾರೆ. ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪ್ರಚಾರ ಮಾಡಿದ ಸುಳ್ಳುಗಳನ್ನು ಸೋಲಿಸಲು ಜನರಿಗೆ ಸತ್ಯವನ್ನು ಹೇಳುತ್ತಲೇ ಇರಬೇಕೆಂದು ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಸಂಸದರಿಗೆ ಕರೆ ಕೊಟ್ಟರು.
ಸರ್ಕಾರದ ಕೆಲಸಗಳ ಬಗ್ಗೆ ಸತ್ಯವನ್ನು ಜನರ ಮುಂದೆ ತೆರೆದಿಡುವ ಮೂಲಕ ಪ್ರತಿಪಕ್ಷಗಳ ಸುಳ್ಳುಗಳ ಸ್ಥಳವನ್ನು ಸತ್ಯದಿಂದ ತುಂಬಿ ಎಂದು ಹೇಳಿದ್ರು. ಕಾಂಗ್ರೆಸ್ ತನ್ನ ಮತದಾರರ ಬಗ್ಗೆ ಚಿಂತಿಸುತ್ತಿಲ್ಲ. ಇದು 60 ವರ್ಷಗಳಿಂದ ದೇಶವನ್ನು ಆಳಿದೆ ಎಂಬ ಪ್ರಜ್ಞೆಯಲ್ಲೇ ಇದೆ. ಅವರಿಗೆ ಸತ್ಯವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಈ ಕಾರಣದಿಂದಾಗಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ರು.