ಕರ್ನಾಟಕ

karnataka

ETV Bharat / bharat

ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ.. ಸುಹಾಸ್​ಗೆ ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯಗಳ ಸುರಿಮಳೆ - ಪ್ಯಾರಾಲಿಂಪಿಕ್​

ಬ್ಯಾಡ್ಮಿಂಟನ್​​ನಲ್ಲಿ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟ ಕನ್ನಡಿಗ ಸುಹಾಸ್ ಯಥಿರಾಜ್​​ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ರಾಷ್ಟ್ರಪತಿ ಕೋವಿಂದ್ ಸೇರಿದಂತೆ ಹಲವು ನಾಯಕರು ಅಭಿನಂದಿಸಿದ್ದಾರೆ.

PM Modi and Vips congratulate silver medalist Paralympian Suhas Yathiraj
ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್​ಗೆ ಪ್ರಧಾನಿ ಮೋದಿ ಅಭಿನಂದನೆ

By

Published : Sep 5, 2021, 10:04 AM IST

ಹೈದರಾಬಾದ್: ಪ್ಯಾರಾಲಿಂಪಿಕ್​​ನಲ್ಲಿ ಬೆಳ್ಳಿ ಪದಕ ಪಡೆದ ಕನ್ನಡಿಗ ಸುಹಾಸ್ ಯಥಿರಾಜ್​​ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇದೀಗ ಪದಕ ಗೆದ್ದ ಸುಹಾಸ್​ಗೆ ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇದು ಕ್ರೀಡೆ ಹಾಗೂ ಸೇವೆಯ ಅದ್ಭುತ ಸಂಗಮ..! ಸುಹಾಸ್ ಯಥಿರಾಜ್ ಅಸಾಧಾರಣ ಕ್ರೀಡಾ ಪ್ರದರ್ಶನದ ಮೂಲಕ ನಮ್ಮ ಇಡೀ ರಾಷ್ಟ್ರದ ಕಲ್ಪನೆಯನ್ನ ಸೆರೆಹಿಡಿದಿದ್ದಾರೆ. ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿ ಪದಕ ಗೆದ್ದ ಅವರಿಗೆ ನನ್ನ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಜತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಟ್ವೀಟ್ ಮಾಡಿ, ಪ್ಯಾರಾಲಿಂಪಿಕ್​ನಲ್ಲಿ ವಿಶ್ವದ ನಂಬರ್ ಒನ್ ಆಟಗಾರನ ವಿರುದ್ಧ ಹೋರಾಡಿ ಬೆಳ್ಳಿ ಪದಕ ಗೆದ್ದ ಸುಹಾಸ್ ಯಥಿರಾಜ್​ಗೆ ಅಭಿನಂದನೆಗಳು. ನಾಗರಿಕ ಸೇವಕರಾಗಿ ಕರ್ತವ್ಯಗಳನ್ನು ನಿರ್ವಹಿಸುವಾಗ ಕ್ರೀಡೆಯನ್ನು ಮುಂದುವರಿಸುವಲ್ಲಿ ನಿಮ್ಮ ಸಮರ್ಪಣೆ ಅಸಾಧಾರಣವಾಗಿದೆ. ನಿಮ್ಮ ಸಾಧನೆಗಳು ಮತ್ತು ಉಜ್ವಲ ಭವಿಷ್ಯಕ್ಕಾಗಿ ಶುಭಾಶಯಗಳು ಎಂದಿದ್ದಾರೆ.

ಸುಹಾಸ್ ಪದಕ ಗೆದ್ದಿರುವ ಹಿನ್ನೆಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿನಂದಿಸಿದ್ದಾರೆ. ಇದಕ್ಕೂ ಮೊದಲು ಹಲವು ಪದಕ ಗೆದ್ದಿದ್ದಾರೆ. ಮೊದಲಿಗೆ ಅವರಿಗೆ ಶುಭಾಶಯಗಳು ಎಂದಿದ್ದಾರೆ.

ಇತ್ತ ಪತಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಪತ್ನಿ ರಿತು ಯಥಿರಾಜ್​, ನನಗೆ ಅವರ ಬಗ್ಗೆ ಹೆಮ್ಮೆ ಇದೆ. ಇದು ಕಳೆದ 6 ವರ್ಷಗಳ ಪರಿಶ್ರಮದ ಫಲವಾಗಿದೆ ಎಂದಿದ್ದಾರೆ. ಸುಹಾಸ್ ಯಥಿರಾಜ್ ಪತ್ನಿ ರಿತು ಯಥಿರಾಜ್ ಸಹ ಗಾಜಿಯಾಬಾದ್​​ನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:Paralympic Badminton: ಕನ್ನಡಿಗ ಸುಹಾಸ್ ಯಥಿರಾಜ್​​ ಮುಡಿಗೆ ಬೆಳ್ಳಿ ಪದಕ

ABOUT THE AUTHOR

...view details