ನವದೆಹಲಿ:ಟೈಮ್ಸ್ ಗ್ರೂಪ್ ಅಧ್ಯಕ್ಷೆ ಇಂದೂ ಜೈನ್ ಅವರು ತಮ್ಮ 84 ನೇ ವಯಸ್ಸಿನಲ್ಲಿ ಗುರುವಾರ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಟೈಮ್ಸ್ ಗ್ರೂಪ್ ಅಧ್ಯಕ್ಷರಾದ ಶ್ರೀಮತಿ ಇಂದೂ ಜೈನ್ ಅವರ ನಿಧನದಿಂದ ನನಗೆ ತೀವ್ರ ಬೇಸರವಾಗಿದೆ. ಅವರ ಸಮುದಾಯದ ಸೇವಾ ಉಪಕ್ರಮಗಳು, ಭಾರತದ ಪ್ರಗತಿಯ ಬಗೆಗಿನ ಉತ್ಸಾಹ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಆಳವಾದ ನಂಬಿಕೆ ಇರಿಸಿಕೊಂಡಿದ್ದರಿಂದ ಸದಾ ಸ್ಮರಣೆಯಲ್ಲಿ ಇರುತ್ತಾರೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಸರಿಸಾಟಿಯಿಲ್ಲದ ಸಹಾನುಭೂತಿ, ಕಠಿಣ ಪರಿಶ್ರಮ ಮತ್ತು ಲೋಕೋಪಕಾರಿ ಕಾರ್ಯಗಳಿಗಾಗಿ ಇಂದೂ ಜೈನ್ ಅವರನ್ನು ಸದಾ ಸ್ಮರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಟೈಮ್ಸ್ ಗ್ರೂಪ್ನ ಅಧ್ಯಕ್ಷರಾದ ಶ್ರೀಮತಿ ಇಂದೂ ಜೈನ್ ಅವರ ನಿಧನವು ತುಂಬಾ ದುಃಖಕರವಾಗಿದೆ. ಸಾಟಿಯಿಲ್ಲದ ಸಹಾನುಭೂತಿ, ಕಠಿಣ ಪರಿಶ್ರಮ ಮತ್ತು ಲೋಕೋಪಕಾರಿ ಕಾರ್ಯಗಳಿಗಾಗಿ ರಾಷ್ಟ್ರವು ಯಾವಾಗಲೂ ಅವರನ್ನು ನೆನಪಿಸಿಕೊಳ್ಳುತ್ತದೆ. ಇಂತಹ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಇಡೀ ಟೈಮ್ಸ್ ಗ್ರೂಪ್ಗೆ ನನ್ನ ಸಂತಾಪ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಅವರ ನಿಧನದ ಬಗ್ಗೆ ದೇಶಾದ್ಯಂತ ಹಲವು ರಾಜಕಾರಣಿಗಳು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.
ಟೈಮ್ಸ್ ಗ್ರೂಪ್ನ ಅಧ್ಯಕ್ಷೆ ಇಂದೂ ಜೈನ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಾಮಾಜಿಕ ಕಾರ್ಯಗಳಿಗೆ ಅವರು ನೀಡಿದ ಕೊಡುಗೆ, ಭಾರತೀಯ ಸಂಸ್ಕೃತಿಯ ಬಗ್ಗೆ ಅವರ ಉತ್ಸಾಹಕ್ಕಾಗಿ ಅವರನ್ನು ಯಾವಾಗಲೂ ಸ್ಮರಿಸಲಾಗುವುದು. ಅಗಲಿದ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಓಂ ಶಾಂತಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಪಿಯೂಷ್ ಗೋಯಲ್, ಸಚಿನ್ ಪೈಲೆಟ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.