ನವದೆಹಲಿ/ಟೋಕಿಯೋ: ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆಯ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಜಪಾನ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಬೆಳಗ್ಗೆ ಟೋಕಿಯೋದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಜಪಾನಿ ಬಾಲಕನೊಬ್ಬ ಭಾರತದ ತ್ರಿವರ್ಣ ಧ್ವಜದ ಪ್ಲಕಾರ್ಡ್ ಹಿಡಿದು, ಮೋದಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ. ಬಾಲಕನ ಮಾತು ಕೇಳಿ ಪ್ರಧಾನಿ ಸಂತಸಗೊಂಡರು.
ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಪುಟ್ಟ ಮಕ್ಕಳು ವಿವಿಧ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲಾದ 'ಸ್ವಾಗತ' ಫಲಕಗಳನ್ನು ಹಿಡಿದು ಟೋಕಿಯೋ ವಿಮಾನ ನಿಲ್ದಾಣದಲ್ಲಿ ನಿಂತಿದ್ದರು. ಮಕ್ಕಳ ಬಳಿ ತೆರಳಿದ ಮೋದಿ, ಕೆಲ ಕಾಲ ಸಂವಾದ ನಡೆಸಿದರು.
ಜಪಾನಿನ ವಿಝುಕಿ ಎಂಬ ಬಾಲಕ ಹಿಂದಿ ಭಾಷೆಯಲ್ಲಿ 'ಜಪಾನ್‌ಗೆ ಸ್ವಾಗತ, ದಯವಿಟ್ಟು ನಿಮ್ಮ ಆಟೋಗ್ರಾಫ್ ಕೊಡಬಹುದೇ? ಎಂದು ಕೇಳಿದ. ಅವನ ಮಾತು ಕೇಳಿದ ಪ್ರಧಾನಿ, ವಾಹ್! ನೀನು ಹಿಂದಿ ಎಲ್ಲಿಂದ ಕಲಿತೆ?. ನಿನಗೆ ಹಿಂದಿ ಚೆನ್ನಾಗಿ ತಿಳಿದಿದೆಯೇ?' ಎಂದು ಪ್ರಶ್ನಿಸಿದರು.