ಕರ್ನಾಟಕ

karnataka

ETV Bharat / bharat

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲಿನ ದಾಳಿಗೆ ಪ್ರಧಾನಿ ಮೋದಿ ಖಂಡನೆ - ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಆರೋಗ್ಯ ಕ್ಷೀಣ

ಎಂಟು ವರ್ಷಗಳ ಕಾಲ ಜಪಾನ್ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅಧಿಕಾರದಲ್ಲಿದ್ದ ಸಮಯದಲ್ಲಿ ಅವರನ್ನು ಡಿಯರ್ ಫ್ರೆಂಡ್ ಎಂದು ಪ್ರಧಾನಿ ಮೋದಿ ಹಲವಾರು ಬಾರಿ ಸಂಬೋಧಿಸಿದ್ದರು.

PM Modi after Shinzo Abe attacked during campaign speech
PM Modi after Shinzo Abe attacked during campaign speech

By

Published : Jul 8, 2022, 11:52 AM IST

ನವದೆಹಲಿ: ಅತಿ ಹೆಚ್ಚು ಕಾಲ ಜಪಾನ್ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅವರ ಮೇಲೆ ನಡೆದ ಗುಂಡಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಜಪಾನ್​ನ ನಾರಾ ಸಿಟಿಯಲ್ಲಿ ಚುನಾವಣಾ ರ್‍ಯಾಲಿಯೊಂದರಲ್ಲಿ ಭಾಷಣ ಮಾಡುತ್ತಿದ್ದ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಗುಂಡು ತಗುಲಿದ ನಂತರ ಅಬೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ, ಶಂಕಿತನ ಬಂಧನ

ಎಂಟು ವರ್ಷಗಳ ಕಾಲ ಜಪಾನ್ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅಧಿಕಾರದಲ್ಲಿದ್ದ ಸಮಯದಲ್ಲಿ ಅವರನ್ನು ಡಿಯರ್ ಫ್ರೆಂಡ್ ಎಂದು ಪ್ರಧಾನಿ ಮೋದಿ ಹಲವಾರು ಬಾರಿ ಸಂಬೋಧಿಸಿದ್ದರು. "ನನ್ನ ಆತ್ಮೀಯ ಸ್ನೇಹಿತ ಅಬೆ ಶಿಂಜೋ ಅವರ ಮೇಲಿನ ದಾಳಿಯಿಂದ ತೀವ್ರವಾಗಿ ನೊಂದಿದ್ದೇನೆ. ಅವರು, ಅವರ ಕುಟುಂಬ ಮತ್ತು ಜಪಾನ್ ಜನರೊಂದಿಗೆ ನಮ್ಮ ಪ್ರಾರ್ಥನೆಗಳು ಇವೆ." ಎಂದು ಪ್ರಧಾನಿ ಮೋದಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details