ಕರ್ನಾಟಕ

karnataka

ETV Bharat / bharat

ವಿವಾ 5ನೇ ಟೆಕ್​ ಸಮ್ಮೇಳನ: ದೇಶದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಮೋದಿ ಕರೆ

2016ರಿಂದ ಪ್ರತಿ ವರ್ಷವು ಪ್ಯಾರಿಸ್​​ನಲ್ಲಿ ಈ ಸಮ್ಮೇಳನ ನಡೆಯುತ್ತಿತ್ತು. ಈ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು, ಉದ್ಯಮಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ.

PM Modi
ಪ್ರಧಾನಿ ಮೋದಿ

By

Published : Jun 16, 2021, 5:23 PM IST

ನವದೆಹಲಿ: ಯೂರೋಪ್​ನ ಅತೀ ದೊಡ್ಡ ವಿವಾ 5ನೇ ಟೆಕ್​ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ದೇಶಿಸಿ ಕಿರು ಭಾಷಣ ಮಾಡಿದ್ದಾರೆ. ಸಾಂಕ್ರಾಮಿಕ ಕೋವಿಡ್​​ ಸಮಯ ನಿಭಾಯಿಸಲು, ಜನರ ಸಂಪರ್ಕಿಸಲು, ಸಾಂತ್ವನ ಕಾರ್ಯದಲ್ಲಿ ಡಿಜಿಟಲ್ ತಂತ್ರಜ್ಞಾನ ಸಹಾಯ ಮಾಡಿದೆ ಎಂದಿದ್ದಾರೆ.

ಭಾರತ ಮತ್ತು ಫ್ರಾನ್ಸ್ ಈ ತಂತ್ರಜ್ಞಾನ ವಿಚಾರದಲ್ಲಿ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ. ಈ ವೇದಿಕೆ ಫ್ರಾನ್ಸ್​ನ ತಾಂತ್ರಿಕ ದೃಷ್ಟಿಯನ್ನ ಪ್ರತಿಬಿಂಬಿಸುತ್ತಿದೆ ಎಂದಿದ್ದಾರೆ. ನಮ್ಮ ಅವಧಿಯಲ್ಲಿ ಅಥಿ ದೊಡ್ಡ ಸವಾಲಾಗಿದ್ದ ಕೋವಿಡ್​​​ ಕಾಲದಲ್ಲಿ ತಂತ್ರಜ್ಞಾನ ನಮಗೆ ಸಹಾಯ ಮಾಡಿದೆ. ಎಲ್ಲ ದೇಶಗಳು ಅಮೂಲ್ಯ ಜೀವಗಳ ಕಳೆದುಕೊಂಡಿವೆ.

ಜೊತೆಗೆ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿವೆ. ಇತ್ತ ಕೋವಿಡ್ ಪರಿಸ್ಥಿತಿಯ ನಿಭಾಯಿಸುವಲ್ಲಿ ತಂತ್ರಜ್ಞಾನ ಹೆಚ್ಚು ಪರಿಣಾಮಕಾರಿಯಾಯಿತು. ಇದರಲ್ಲಿ ಸ್ಟಾರ್ಟ್​​ಅಪ್​​ಗಳು ಪ್ರಮುಖ ಪಾತ್ರ ವಹಿಸಿದವು ಎಂದು ನೆನಪಿಸಿಕೊಂಡಿದ್ದಾರೆ.

ಪ್ರತಿಭೆ, ಮಾರುಕಟ್ಟೆ, ಬಂಡವಾಳ, ಅತ್ಯುತ್ತಮ ಪರಿಸರ ವ್ಯವಸ್ಥೆ ಮತ್ತು ಮುಕ್ತತೆ ಎಂಬ ಐದು ಸಂಸ್ಕೃತಿಯ ಸ್ತಂಭಗಳ ಆಧಾರದ ಮೇಲೆ ಭಾರತದಲ್ಲಿ ಹೂಡಿಕೆ ಮಾಡಲು ನಾನು ಜಗತ್ತನ್ನು ಆಹ್ವಾನಿಸುತ್ತೇನೆ.

ಭಾರತವು ವಿಶ್ವದ ಅತೀ ದೊಡ್ಡ ಸ್ಟಾರ್ಟ್​​ಅಪ್ ಇಕೋ ಸಿಸ್ಟಂ ಎನಿಸಿಕೊಂಡಿದೆ. ಹಲವು ದಿಗ್ಗಜ ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹೂಡಿಕೆಗೆ ಆಗಮಿಸಿವೆ. ಹೂಡಿಕೆದಾರರ ಬೇಡಿಕೆಗಳನ್ನು ಭಾರತವು ಪೂರೈಸಲಿದೆ ಎಂದು ಇದೇ ವೇಳೆ ಅವರು ಉದ್ಯಮಿಗಳಿಗೆ ಅಭಯ ನೀಡಿದ್ದಾರೆ.

ಓದಿ:ಲಕ್ಷದ್ವೀಪದಲ್ಲಿ ಖಾಸಗಿ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭಿಸಿದ ಸರ್ಕಾರ!

ABOUT THE AUTHOR

...view details