ನವದೆಹಲಿ:ಎಲ್ಲ ರಾಜ್ಯಗಳ 18 ವರ್ಷದ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ ಎಂದರು. ಕೊರೊನಾದಿಂದಾಗಿ ನಮ್ಮ ಜೊತೆಗಿದ್ದ ಹಲವರನ್ನು ಕಳೆದುಕೊಂಡಿದ್ದೇವೆ. ಅಂತಹ ಕುಟುಂಬಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದರು. ವಿಶ್ವದ ಅನೇಕ ದೇಶಗಳಂತೆ ಭಾರತವೂ ಸಂಕಷ್ಟ ಎದುರಿಸುತ್ತಿದೆ ಎಂದು ಹೇಳಿದರು.
ಎಲ್ಲ ನಾಗರಿಕರಿಗೆ ಉಚಿತ ಲಸಿಕೆ, ದೀಪಾವಳಿವರೆಗೆ ಉಚಿತ ಪಡಿತರ: ಪ್ರಧಾನಿ ಮೋದಿ ಘೋಷಣೆ ಎಲ್ಲರಿಗೂ ಉಚಿತ ಲಸಿಕೆ:
ಜೂನ್ 21ರ ಯೋಗ ದಿನದ ನಂತರ ದೇಶದಲ್ಲಿ ಲಸಿಕೆ ವಿತರಣಾ ಅಭಿಯಾನ ಹೊಸ ವೇಗ ಪಡೆಯಲಿದೆ. ಕೇಂದ್ರ ಸರ್ಕಾರವೇ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಲಸಿಕೆ ಪೂರೈಸಲಿದೆ. ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಕೊಡಲಾಗುವುದು. ಲಸಿಕೆ ವಿತರಣೆಯಲ್ಲಿ ಬಡವರು, ಮಧ್ಯಮ ವರ್ಗದವರು ಎಂಬ ಭೇದ ಇರುವುದಿಲ್ಲ ಎಂದರು.
ಎಲ್ಲ ನಾಗರಿಕರಿಗೆ ಉಚಿತ ಲಸಿಕೆ, ದೀಪಾವಳಿವರೆಗೆ ಉಚಿತ ಪಡಿತರ: ಪ್ರಧಾನಿ ಮೋದಿ ಘೋಷಣೆ ಬಡವರಿಗೆ ದೀಪಾವಳಿವರೆಗೂ ಉಚಿತ ಪಡಿತರ:
ಈ ಮಹಾಪಿಡುಗಿನ ಸಂಕಷ್ಟದ ಸಮಯದಲ್ಲಿ ನಾವು ಜನರ ಕೈ ಬಿಡುವುದಿಲ್ಲ. ದೇಶದ 80 ಕೋಟಿ ಜನರಿಗೆ ದೀಪಾವಳಿವರೆಗೂ ಉಚಿತವಾಗಿ ಆಹಾರ ಧಾನ್ಯ ನೀಡಲಾಗುವುದು ಎಂದು ಪ್ರಧಾನಿ ಘೋಷಣೆ ಮಾಡಿದರು.
ಮಾರಕ ಕೊರೊನಾ ಕಳೆದ 100 ವರ್ಷಗಳಲ್ಲಿ ವಿಶ್ವ ಕಂಡ ಅತ್ಯಂತ ಭೀಕರ ಸಾಂಕ್ರಾಮಿಕ ರೋಗ ಎಂದು ಮೋದಿ ಹೇಳಿದರು. ಆಧುನಿಕ ಜಗತ್ತು ಇಂತಹ ಮಹಾಮಾರಿಯನ್ನು ಎಂದೂ ಕಂಡಿರಲಿಲ್ಲ. ಭಾರತ ಈ ಸಾಂಕ್ರಾಮಿಕ ರೋಗವನ್ನು ಹಲವು ಸ್ತರಗಳಲ್ಲಿ ಎದುರಿಸುತ್ತಿದೆ ಎಂದು ನುಡಿದರು.
ಎಲ್ಲ ನಾಗರಿಕರಿಗೆ ಉಚಿತ ಲಸಿಕೆ, ದೀಪಾವಳಿವರೆಗೆ ಉಚಿತ ಪಡಿತರ: ಪ್ರಧಾನಿ ಮೋದಿ ಘೋಷಣೆ ಪ್ರಮುಖಾಂಶಗಳು
- ಭಾರತ ತನ್ನ ಶಕ್ತಿ ಮೀರಿ ಕೊರೊನಾ 2ನೇ ಅಲೆ ವಿರುದ್ಧ ಹೋರಾಡಿದೆ
- ದೇಶದ ಆರೋಗ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳು ಹೆಚ್ಚಾಗಿವೆ
- ಇಷ್ಟೊಂದು ಪ್ರಮಾಣದಲ್ಲಿ ಆಕ್ಸಿಜನ್ ಹಿಂದೆಂದೂ ಅಗತ್ಯವಿರಲಿಲ್ಲ
- ಈ ಬಾರಿ ಸಮರೋಪಾದಿಯಲ್ಲಿ ಆಕ್ಸಿಜನ್ ಸರಬರಾಜು ಆಗಿದೆ
- ಕೊರೊನಾ ಲಸಿಕೆ ಪ್ರತಿಯೊಬ್ಬರಿಗೂ ರಕ್ಷಾ ಕವಚವಾಗಿದೆ
- ನಾವು ಸ್ವತಃ ವ್ಯಾಕ್ಸಿನ್ ತಯಾರಿಸಲು ಸಾಧ್ಯವಾಗದೇ ಇದ್ದಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು?
- ಆ ಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಕಳವಳ
ಎಲ್ಲ ನಾಗರಿಕರಿಗೆ ಉಚಿತ ಲಸಿಕೆ, ದೀಪಾವಳಿವರೆಗೆ ಉಚಿತ ಪಡಿತರ: ಪ್ರಧಾನಿ ಮೋದಿ ಘೋಷಣೆ
ದೇಶಾದ್ಯಂತ ಲಸಿಕಾಕರಣ ಆಗಬೇಕಿದೆ:
ದೇಶದಲ್ಲಿ ಸಂಪೂರ್ಣ ಲಸಿಕಾಕರಣ ಆಗಬೇಕು. ಇದು ವರ್ಷಗಟ್ಟಲೆ ಆಗಬಹುದು ಎಂಬ ಆತಂಕ ವ್ಯಕ್ತವಾಯಿತು. ಹೀಗಾಗಿಯೇ ಇಂದ್ರಧನುಷ್ ಯೋಜನೆಯ ಮೂಲಕ ಲಸಿಕೆ ಹಾಕುವ ಪ್ರಮಾಣ ಹೆಚ್ಚಿಸಿದೆವು. ಹೀಗಾಗಿ ಕೇವಲ 5 ವರ್ಷಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ಈಗ 23 ಕೋಟಿ ಲಸಿಕೆಗಳನ್ನು ನೀಡಲಾಗಿದೆ. ದೇಶಾದ್ಯಂತ ಲಸಿಕಾಕರಣ ವ್ಯಾಪಕವಾಗಿ ನಡೆಯುತ್ತಿದೆ ಎಂದರು.
ಎಲ್ಲ ನಾಗರಿಕರಿಗೆ ಉಚಿತ ಲಸಿಕೆ, ದೀಪಾವಳಿವರೆಗೆ ಉಚಿತ ಪಡಿತರ: ಪ್ರಧಾನಿ ಮೋದಿ ಘೋಷಣೆ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಜಗತ್ತನ್ನು ಕಂಗೆಡಿಸಿರುವ ಅದೃಶ್ಯ ಅಥವಾ ರೂಪಾಂತರಿ ಸೋಂಕಿನ ವಿರುದ್ಧ ಹೋರಾಡಲು ನಮಗೆ ಇರುವ ಅತೀ ದೊಡ್ಡ ಅಸ್ತ್ರ ಅಂದರೆ ಅದು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸುವುದು. ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿಯೂ ಭಾರತ ಕಡಿಮೆ ಅವಧಿಯಲ್ಲಿ ಲಸಿಕೆ ಅಭಿವೃದ್ಧಿಪಡಿಸಿದೆ. ವಿಶ್ವದಲ್ಲಿ ಅತೀ ಹೆಚ್ಚು ಲಸಿಕೆ ಭಾರತದಲ್ಲಿ ನೀಡಲಾಗುತ್ತಿದೆ. 130 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡುವುದು ಸವಾಲಿನ ಕೆಲಸವಾಗಿದೆ ಎನ್ನುವ ಮೂಲಕ ರಾಷ್ಟ್ರದ ಜನರ ಎದುರು ವಾಸ್ತವ ಬಿಚ್ಚಿಡುವ ಪ್ರಯತ್ನ ಮಾಡಿದರು.
ಕೋವಿಡ್ ಈ ಶತಮಾನದ ಅತೀ ದೊಡ್ಡ ಮಹಾಮಾರಿಯಾಗಿದೆ. ಇಂತಹ ವೈರಸ್ ಹಿಂದೆಂದೂ ಕಂಡಿರಲಿಲ್ಲ. ಒಂದೇ ವರ್ಷದಲ್ಲಿ ಎರಡು ಲಸಿಕೆಗಳನ್ನು ಕಂಡು ಹಿಡಿದಿದ್ದೇವೆ. ದೇಶದಲ್ಲಿ 23 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ್ದೇವೆ. ಇದೀಗ ಕೋವಿಡ್ ಲಸಿಕೆಯೇ ನಮ್ಮ ಸುರಕ್ಷಾ ಕವಚವಾಗಿದೆ ಎಂದು ಪ್ರತಿಪಾದಿಸಿದರು.
ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹೆಚ್ಚಳ:
ಕಳೆದ ಒಂದೂವರೆ ವರ್ಷಗಳಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಮೆಡಿಕಲ್ ಆಕ್ಸಿಜನ್ನ ಇಷ್ಟೊಂದು ಕೊರತೆ ಎಂದು ಆಗಿರಲಿಲ್ಲ ಎಂದರು. ವಿಶ್ವದ ಅನೇಕ ದೇಶಗಳಂತೆ ಭಾರತವೂ ಸಂಕಷ್ಟ ಎದುರಿಸುತ್ತಿದೆ. ಭಾರತ ತನ್ನ ಶಕ್ತಿ ಮೀರಿ ಕೊರೊನಾ 2ನೇ ಅಲೆ ವಿರುದ್ಧ ಹೋರಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಸೇನೆಯ ಮೂರೂ ತುಕಡಿಗಳು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾದವು. ವಿಶ್ವದ ಮೂಲೆ ಮೂಲೆಗಳಿಂದ ನಾನಾ ರಾಷ್ಟ್ರಗಳು ನೀಡಿದ ಸಹಾಯವನ್ನು ಎಷ್ಟು ಸಾಧ್ಯವೋ ಅಷ್ಟು ಪೂರೈಸಲು ಸೇನಾ ಪಡೆಗಳು ಪ್ರಯತ್ನ ಮಾಡಿವೆ ಎಂದರು.
ಕೋಟ್ಯಂತರ ರೂ. ರೋಗ ನಿರ್ಮೂಲನೆಗೆ ಖರ್ಚು ಮಾಡಿದ್ದೇವೆ:
- ಆತ್ಮನಿರ್ಭರ್ ಪ್ಯಾಕೇಜ್ನಡಿ ಕೊವಿಡ್ ಪ್ಯಾಕೇಜ್ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ.
- ಮುಂದಿನ ದಿನಗಳಲ್ಲಿ ಲಸಿಕೆಗಳ ಲಭ್ಯತೆ ಇನ್ನೂ ಹೆಚ್ಚಲಿದೆ. ದೇಶದ 7 ಕಂಪನಿಗಳು ಲಸಿಕೆ ತಯಾರಿಸುತ್ತಿವೆ.
- 3 ಟ್ರಯಲ್ಗಳು ಮುಂದುವರೆದಿವೆ, ಎಲ್ಲರಿಗೂ ಲಸಿಕೆ ನೀಡುತ್ತೇವೆ.
- ಇತರ ದೇಶಗಳ ಕಂಪನಿಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ.
- ಕೆಲ ತಜ್ಞರ ಮೂಲಕ ಮಕ್ಕಳ ಸುರಕ್ಷೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ.
- ಮಕ್ಕಳಿಗೆ ಲಸಿಕೆ ನೀಡುವ ಪರೀಕ್ಷೆ ನಡೆಯುತ್ತಿದೆ.
- ಮೂಗಿನ ಮೂಲಕ ಕೊಡುವ (ನಸಲ್) ಲಸಿಕೆಯ ಟ್ರಯಲ್ ಸಹ ನಡೆಯುತ್ತಿದೆ.
- ಈ ಲಸಿಕೆಯಲ್ಲಿ ಸಫಲತೆ ಸಿಕ್ಕರೆ ಭಾರತದಲ್ಲಿ ಲಸಿಕೆ ಅಭಿಯಾನ ಇನ್ನಷ್ಟು ವೇಗ ಪಡೆಯುತ್ತದೆ.
- ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ಮಾಡುವುದರಿಂದ ವಿಶ್ವದ ಜನಸಮುದಾಯಕ್ಕೆ ಅನುಕೂಲವಾಗಿದೆ
ಖಾಸಗಿ ಆಸ್ಪತ್ರೆಗಳೂ ಲಸಿಕೆ ಖರೀದಿಸಬಹುದು:
ಉಚಿತ ಲಸಿಕೆಯ ಬದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಲು ಇಚ್ಛಿಸುವವರು ಅಲ್ಲೂ ತೆಗೆದುಕೊಳ್ಳಬಹುದು ಎಂದು ಮೋದಿ ತಿಳಿಸಿದರು. ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಲಸಿಕೆ ಖರೀದಿಸಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 150 ರೂಪಾಯಿ ಸೇವಾ ಶುಲ್ಕ ವಿಧಿಸಬಹುದಾಗಿದೆ. ಶೇ.75ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರ ಖರೀದಿಸಲಿದೆ ಎಂದು ಮೋದಿ ಪ್ರಕಟಿಸಿದರು.