ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೆಕ್ಕಪತ್ರ ದಿನದ ಅಂಗವಾಗಿ (Audit Diwas)ಇಲ್ಲಿನ ಕಂಟ್ರೋಲರ್ ಆ್ಯಂಡ್ ಅಡಿಟರ್ ಜನರಲ್(CAG) ಕಚೇರಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
'ಲೆಕ್ಕಪತ್ರ ಪರಿಶೋಧನಾ ಸಂಸ್ಥೆಯ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ದೇಶಕ್ಕೆ ತೋರಿಸಲು ಇಂದು ಆಡಿಟ್ ದಿನವನ್ನು ಆಚರಿಸಲಾಯಿತು. ಸಿಎಜಿ ಸಂಸ್ಥೆ ಆಡಳಿತದಲ್ಲಿ ತೋರಿದ ಕಾರ್ಯಕ್ಷಮತೆ ಗಮನಾರ್ಹ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.