ಕರ್ನಾಟಕ

karnataka

ETV Bharat / bharat

ಪಿಎಂ ಕಿಸಾನ್​ ನಿಧಿ 11ನೇ ಕಂತು ರಿಲೀಸ್ ಮಾಡಿದ ನಮೋ.. 10 ಕೋಟಿ ಅನ್ನದಾತರ ಖಾತೆಗೆ ಬಂತು 2 ಸಾವಿರ ರೂ! - ಪಿಎಂ ಕಿಸಾನ್ ನಿಧಿಯ 11ನೇ ಕಂತಿನ ಹಣ

ಪಿಎಂ ಕಿಸಾನ್​ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತು ಇಂದು ರಿಲೀಸ್​ ಆಗಿದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಣ ರಿಲೀಸ್ ಮಾಡಿದ್ದಾರೆ.

PM Kisan 11th instalment
PM Kisan 11th instalment

By

Published : May 31, 2022, 3:55 PM IST

ಶಿಮ್ಲಾ(ಹಿಮಾಚಲ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷಗಳ ಕಾಲ ಪೂರೈಕೆ ಮಾಡಿದ್ದು, ಇದರ ಬೆನ್ನಲ್ಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 11ನೇ ಕಂತಿನ ಹಣ ರಿಲೀಸ್ ಮಾಡಲಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ನಮೋ ಭಾಗಿಯಾಗಿ, ಬರೋಬ್ಬರಿ 21,000 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದಾರೆ.

ಒಟ್ಟು 10 ಕೋಟಿ ಅನ್ನದಾತರ ಖಾತೆಗಳಿಗೆ ನೇರವಾಗಿ 2 ಸಾವಿರ ರೂಪಾಯಿ ನಗದು ಜಮಾವಣೆಗೊಂಡಿದೆ. ಈ ಯೋಜನೆಗೋಸ್ಕರ ಇಲ್ಲಿಯವರೆಗೆ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತ ವೆಚ್ಚ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಣ್ಣ ಹಿಡುವಳಿದಾರರಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದು, ನಾಲ್ಕು ತಿಂಗಳಿಗೊಮ್ಮೆ ನೇರವಾಗಿ ರೈತರ ಖಾತೆಗಳಿಗೆ 2 ಸಾವಿರ ಹಣ ಜಮಾವಣೆ ಆಗುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ 4 ಸಾವಿರ ರೂ. ಹಣ ನೀಡುತ್ತಿದೆ.

ಈ ಹಿಂದೆ 10ನೇ ಕಂತಿನ ಹಣ ಬಿಡುಗಡೆ ಮಾಡಿದಾಗ ಕೆಲ ರೈತರ ಖಾತೆಗಳಿಗೆ ಹಣ ಜಮಾವಣೆಗೊಂಡಿರಲಿಲ್ಲ. ಇದೀಗ ಎರಡು ಕಂತಿನ ಹಣ ಒಟ್ಟಿಗೆ ಜಮಾವಣೆಯಾಗಲಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಹಣ ಬಾರದಿದ್ದರೆ 155261 ಅಥವಾ 011-24300606 ನಂಬರ್​ಗೆ ಫೋನ್ ಮಾಡಿ, ಮಾಹಿತಿ ಪಡೆದುಕೊಳ್ಳಬಹುದುದಾಗಿದೆ.

ಇದನ್ನೂ ಓದಿ:ಅತ್ತೆಯ ಕಿರುಕುಳವೇ ಸ್ಫೂರ್ತಿ; UPSC ಪಾಸ್ ಮಾಡಿದ 7 ವರ್ಷದ ಮಗುವಿನ ತಾಯಿ

ಹಣ ಬಂದಿರುವ ಬಗ್ಗೆ ಪರಿಶೀಲನೆ ಮಾಡುವುದು ಹೇಗೆ!?: https://pmkisan.gov.inವೆಬ್​​ಸೈಟ್​ಗೆ ಭೇಟಿ ನೀಡಿ, ಅಲ್ಲಿ Farmers Corner ಆಯ್ಕೆ ಮೇಲೆ ಕ್ಲಿಕ್​​​ ಮಾಡಿ ತದನಂತರ ಫಲಾನುಭವಿಗಳ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು. ಪ್ರಮುಖವಾಗಿ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನ ಆಯ್ಕೆ ಮಾಡುವುದು ಕಡ್ಡಾಯ.

ABOUT THE AUTHOR

...view details