ಕರ್ನಾಟಕ

karnataka

ETV Bharat / bharat

ಸ್ವಾತಂತ್ರ್ಯ ದಿನಕ್ಕೆ ವಿಶೇಷ ಅತಿಥಿಗಳಾಗಿ ಟೋಕಿಯೋ ಒಲಿಂಪಿಕ್ಸ್ ಭಾರತದ ಅಥ್ಲೀಟ್ಸ್​​ : ನಮೋ ಆಹ್ವಾನ - ಮೋದಿ ವಿಶೇಷ ಆಹ್ವಾನ

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಿ ಭಾರತದ ಗೌರವ ಹೆಚ್ಚಿಸಿರುವ ಭಾರತದ ಕ್ರೀಡಾಪಟುಗಳೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಲು ನಮೋ ಮುಂದಾಗಿದ್ದು, ಆಗಸ್ಟ್​ 15ರಂದು ಅವರಿಗೆಲ್ಲ ವಿಶೇಷ ಆಹ್ವಾನ ನೀಡಿದ್ದಾರೆ.

PM Modi
PM Modi

By

Published : Aug 3, 2021, 3:03 PM IST

ನವದೆಹಲಿ:ಜಪಾನ್​​ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್ಸ್​ಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಹ್ವಾನ ನೀಡಿದ್ದಾರೆ. ಆಗಸ್ಟ್​ 15ರಂದು ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಗೆ ಇವರಿಗೆಲ್ಲ ವಿಶೇಷ ಅತಿಥಿಗಳಾಗಿ ಆಹ್ವಾನ ಮಾಡಲಾಗಿದೆ.

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಈ ಸಲ ಭಾರತದ ಹೆಚ್ಚಿನ ಅಥ್ಲೀಟ್ಸ್​ಗಳು ಭಾಗಿಯಾಗಿದ್ದು, ಪದಕ ಗೆಲ್ಲುವಲ್ಲಿ ವಿಫಲಗೊಂಡಿದ್ದರೂ, ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೋಗೆ ತೆರಳುವುದಕ್ಕೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಎಲ್ಲ ಅಥ್ಲೀಟ್ಸ್​​ಗಳೊಂದಿಗೆ ಮಾತನಾಡಿದ್ದರು. ಈ ವೇಳೆ, ಅವರಿಗೆ ಮತ್ತಷ್ಟು ಆತ್ಮಸ್ಥೈರ್ಯ ತುಂಬಿ, ಕ್ರೀಡಾಕೂಟದಲ್ಲಿ ಭಾಗಿಯಾಗಲು ಕಳುಹಿಸಿಕೊಟ್ಟಿದ್ದರು.

ಪ್ರಧಾನ್​​ ಮಂತ್ರಿ ಗರೀಬ್​ ಕಲ್ಯಾಣ್​ ಅನ್ನ ಯೋಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಸಲ ಭಾರತದಿಂದ ಅತಿ ಹೆಚ್ಚಿನ ಅಥ್ಲೀಟ್ಸ್​ಗಳು ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಲು ಅರ್ಹತೆ ಗಿಟ್ಟಿಸಿಕೊಂಡಿದ್ದು, ವಿಶ್ವದ ಟಾಪ್​​ ಕ್ರೀಡಾಪಟುಗಳೊಂದಿಗೆ ಸೆಣಸಾಟ ನಡೆಸಿದ್ದಾರೆ. ಜೊತೆಗೆ ಉತ್ತಮವಾದ ಪ್ರದರ್ಶನ ನೀಡಿದ್ದಾರೆ ಎಂದರು. ದೇಶದ ಅತಿದೊಡ್ಡ ಬಿಕ್ಕಟ್ಟಿಗೆ ಒಳಗಾಗಿ ಕೋವಿಡ್​ನಿಂದ ಹೋರಾಟ ನಡೆಸಿದ್ದ ಸಂದರ್ಭದಲ್ಲಿ ಅನೇಕ ಆಟಗಾರರು​ ಈ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಇದೀಗ ಸ್ವಾತಂತ್ರ್ಯೋತ್ಸವ ದಿನ ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಈ ಸಲದ ಟೋಕಿಯೋ ಒಲಿಂಪಿಕ್ಸ್​ನಲ್ಲಿ 120ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿಯಾಗಿದ್ದು, ಮೀರಾಬಾಯಿ ಚನು ಬೆಳ್ಳಿ ಹಾಗೂ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ.

ABOUT THE AUTHOR

...view details