ನವದೆಹಲಿ : ದೆಹಲಿ ಮೆಟ್ರೋದ ಮೆಜೆಂಟಾ ಲೈನ್ನಲ್ಲಿ ದೇಶದ ಮೊದಲ ಚಾಲಕರಹಿತ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಪಿಎಂ ನರೇಂದ್ರ ಮೋದಿ 130 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ, ದೆಹಲಿಯು ಪ್ರಮುಖ ಜಾಗತಿಕ ಹಣಕಾಸು ಮತ್ತು ಕಾರ್ಯತಂತ್ರದ ಶಕ್ತಿಯ ಹೊಂದಿರುವ ರಾಜಧಾನಿಯಾಗಿದೆ. ಈ ವೈಭವವು ಇಲ್ಲಿ ಪ್ರತಿಫಲಿಸಬೇಕು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ದೆಹಲಿಯ ಜನರ ಜೀವನವನ್ನು ಉತ್ತಮಗೊಳಿಸುತ್ತೇವೆ ಇದರೊಂದಿಗೆ ನಗರವು ಪ್ರಗತಿಯತ್ತಸಾಗುತ್ತದೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.
ಈ ಮೆಜೆಂಟಾ ಲೈನ್ನಲ್ಲಿ ಚಾಲಕರಹಿತ ಸೇವೆಗಳು ಪ್ರಾರಂಭವಾದ ನಂತರ ದೆಹಲಿ ಮೆಟ್ರೋದ ಪಿಂಕ್ ಲೈನ್ 2021ರ ಮಧ್ಯಭಾಗದಲ್ಲಿ ಚಾಲಕರಹಿತ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ.